ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

Date:

 

ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ದೈಹಿಕ ವಾಂಛೆ ತೀರಿಸಿಕೊಂಡ ಪ್ರಿಯಕರ ಕೈಕೊಟ್ಟುಹೋದಾಗ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಪ್ರೀತಿ ಮಾಡೋದು ತಪ್ಪಲ್ಲ, ಆದರೆ ಮದುವೆಗೂ ಮುಂಚೆ ಹಾಸಿಗೆ ಹಂಚಿಕೊಳ್ಳುವುದಿದೆಯಲ್ಲಾ.. ಅದು ತಪ್ಪು. ಯಾವುದೇ ಲವ್‍ಸ್ಟೋರಿ ಯಶಸ್ವಿಯಾಗಬೇಕಾದರೇ ಮದುವೆಗೂ ಮುನ್ನ ಲೈಂಗಿಕ ಚಟುವಟಿಕೆಗಳು ಬೇಡ ಎಂದು ಎಷ್ಟೇ ಬುದ್ದಿ ಹೇಳಿದರೂ ಯಾಮಾರಿಬಿಡುತ್ತಾರೆ. ಹಾಗೇ ಯಾಮಾರಿದವಳಲ್ಲಿ ತುಮಕೂರು ಮೂಲದ ಈ ಯುವತಿಯೂ ಒಬ್ಬಳು. ಬಿಎ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದ ಈ ಯುವತಿಯ ಮೊಬೈಲ್‍ಗೆ ಗಿರೀಶ್ ಎಂಬಾತ ಮಿಸ್ಡ್ ಕಾಲ್ ಕೊಟ್ಟ. ಅದೇ ಮಿಸ್ಡ್ ಕಾಲ್ ಮುಂದೆ ಪರಿಚಯಕ್ಕೆ ನಾಂದಿಯಾಯಿತು. ಪರಿಚಯ ಸ್ನೇಹವಾಯಿತು. ಸ್ನೇಹ ಪ್ರೇಮವಾಯಿತು. ಪ್ರೇಮ ಕಾಮದ ಹೊಳೆಯಲ್ಲಿ ವಿಹಾರ ಮಾಡಿತ್ತು. ಆದರೆ ದಡ ಸೇರುವ ಸೂಚನೆಯಿರಲಿಲ್ಲ. ಈ ಗಿರೀಶ್ ಮೊನ್ನೆ ಚಿಕ್ಕಾಬಳ್ಳಾಪುರದ ದಿನ್ನೆ ಹೊಸಹಳ್ಳಿ ಎಂಬಲ್ಲಿಗೆ ಪ್ರಿಯತಮೆಯನ್ನು ಕರೆಸಿಕೊಂಡ. ಬಸ್ಟ್ಯಾಂಡ್‍ನಲ್ಲಿ ನಿಂತವಳನ್ನು ಆಟೋದಲ್ಲಿ ಕರೆದುಕೊಂಡು ಸಮೀಪದ ನೀಲಗಿರಿ ತೋಪಿಗೆ ಹೋದ. ಅಲ್ಲಾಗಲೇ ಮೂರು ಮಂದಿ ಆಟೋಡ್ರೈವರ್‍ಗಳಿದ್ದರು. ಆಮೇಲೆ ಅಲ್ಲಿ ನಡೆದಿದ್ದು ಗ್ಯಾಂಗ್‍ರೇಪ್. ಪ್ರೇಮದ ಹೆಸರಿನಲ್ಲಿ ಯುವತಿಯನ್ನು ಮನಸೋಇಚ್ಛೆ ಬಳಸಿಕೊಂಡಿದ್ದ ಪ್ರಿಯಕರ ಕಡೆಗೆ ಅವಳನ್ನು ಸ್ನೇಹಿತರಿಗೂ ಹಂಚಿಬಿಟ್ಟಿದ್ದ. ಚಿಕ್ಕಾಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಿಯಕರ ಗಿರೀಶ್ ತಪ್ಪಿಸಿಕೊಂಡಿದ್ದಾನೆ. ಅಪರಿಚಿತರ ಜೊತೆ ಪ್ರೀತಿ ಪ್ರೇಮ ಅಂತ ಹೋಗುವವರಿಗೆ ಈ ಪ್ರಕರಣ ಪಾಠವಾಗಬೇಕು.

POPULAR  STORIES :

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...