ಕೊರೋನಾವೈರಸ್ ನಿಂದಾಗಿ ಚಿತ್ರಮಂದಿರಗಳನ್ನ ಸಂಪೂರ್ಣವಾಗಿ ಮುಚ್ಚಿಸಲಾಗಿತ್ತು. ತದನಂತರ ಕೊರೋನಾವೈರಸ್ ಹಾವಳಿ ಕೊಂಚಮಟ್ಟಿಗೆ ತಗ್ಗಿದ ನಂತರ ಅರ್ಧದಷ್ಟು ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಇನ್ನು ಫೆಬ್ರವರಿ ತಿಂಗಳಿನಿಂದ ಸಂಪೂರ್ಣವಾಗಿ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರವೇ ಅನುಮತಿಯನ್ನು ನೀಡಿತ್ತು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಈ ತಿಂಗಳು ಪೂರ್ತಿ ಚಿತ್ರಮಂದಿರವನ್ನು ಅರ್ಧದಷ್ಟು ಮಾತ್ರ ತೆರೆಯಲು ನಿರ್ಧರಿಸಿದೆ.
ಹೌದು ಕರ್ನಾಟಕದಲ್ಲಿನ ಚಿತ್ರಮಂದಿರಗಳಿಗೆ ಫೆಬ್ರವರಿ ತಿಂಗಳು ಪೂರ್ತಿ ಸಂಪೂರ್ಣ ಚಿತ್ರಮಂದಿರಗಳನ್ನು ತೆರೆಯಲು ಅವಕಾಶವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಈ ಸುದ್ದಿ ಚಿತ್ರ ಪ್ರೇಮಿಗಳಲ್ಲಿ ಭಾರಿ ನಿರಾಸೆಯನ್ನು ಉಂಟುಮಾಡಿದೆ.