ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಪೊಗರು ಇದೇ ಫೆಬ್ರವರಿ 19 ರಂದು ಭರ್ಜರಿಯಾಗಿ ಬಿಡುಗಡೆಯಾಗಲು ಸಿದ್ಧತೆಯನ್ನು ನಡೆಸಲಾಗಿತ್ತು. ಇದೇ ಸಮಯಕ್ಕೆ ಫೆಬ್ರವರಿ ತಿಂಗಳಿನಿಂದ ದೇಶದಾದ್ಯಂತ ಸಂಪೂರ್ಣವಾಗಿ ಚಿತ್ರಮಂದಿರಗಳನ್ನ ತೆರೆಯಬಹುದು ಎಂಬ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು. ಬಿಡುಗಡೆಗೆ ರೆಡಿಯಾಗಿರುವ ಪೊಗರು ಚಿತ್ರಕ್ಕೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.
ಆದರೆ ಇದೀಗ ಬಂದಿರುವ ಹೊಸ ನಿಯಮದ ಪ್ರಕಾರ ಪೊಗರು ಚಿತ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೌದು ರಾಜ್ಯ ಸರ್ಕಾರ ಹೊಸ ನಿಯಮವನ್ನು ಹೊರಡಿಸಿದ್ದು ಫೆಬ್ರವರಿ ತಿಂಗಳು ಮುಗಿಯುವವರೆಗೆ ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಿ ಸಂಪೂರ್ಣವಾಗಿ ಪ್ರೇಕ್ಷಕರಿಗೆ ಅವಕಾಶವನ್ನ ನೀಡುವಂತಿಲ್ಲ. ಹೌದು ಫೆಬ್ರವರಿ ತಿಂಗಳು ಪೂರ್ತಿ ಕರ್ನಾಟಕದಲ್ಲಿನ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಸಹ 50% ಪ್ರೇಕ್ಷಕರಿಗೆ ಮಾತ್ರ ಅವಕಾಶವನ್ನು ನೀಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಯಡಿಯೂರಪ್ಪನವರ ಈ ಹೊಸ ನಿರ್ಧಾರದಿಂದ ಇದೀಗ ಬಿಡುಗಡೆಗೆ ರೆಡಿಯಾಗಿದ್ದ ಪೊಗರು ಚಿತ್ರಕ್ಕೆ ಕೊಂಚ ಹಿನ್ನಡೆಯಾಗಿರುವುದಂತೂ ನಿಜ. ಸಂಪೂರ್ಣ ಚಿತ್ರಮಂದಿರ ಸಿಗಲಿದೆ ಹೀಗಾಗಿ ಒಳ್ಳೆಯ ಕಲೆಕ್ಷನ್ ಮಾಡಿಕೊಳ್ಳಬಹುದು ಎಂದು ಯೋಜನೆ ಹಾಕಿಕೊಂಡಿದ್ದ ಪೊಗರು ಚಿತ್ರತಂಡಕ್ಕೆ ಇದೀಗ ಬೇಸರ ಉಂಟಾಗಿದೆ. ಇತರೆ ರಾಜ್ಯಗಳಲ್ಲಿ ಸಂಪೂರ್ಣವಾಗಿ ಚಿತ್ರಮಂದಿರವನ್ನು ತೆರೆದಿದ್ದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಇನ್ನೂ ಅದೇ ಹಳೇ ನಿಯಮವನ್ನ ಏಕೆ ಪಾಲಿಸಬೇಕು ಎಂಬುದು ಇದೀಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ..