ಕನ್ನಡಿಗ ಅಗರ್ ವಾಲ್ ಇನ್ನೂ ಕಾಯ್ಬೇಕು ಅಂದಿದ್ದೇಕೆ ಗಂಭೀರ್?

Date:

ಕನ್ನಡಿಗ ಅಗರ್ ವಾಲ್ ಇನ್ನೂ ಕಾಯ್ಬೇಕು ಅಂದಿದ್ದೇಕೆ ಗಂಭೀರ್?

ಟೀಮ್‌ ಇಂಡಿಯಾ ಪರ ಟೆಸ್ಟ್‌ ಕ್ರಿಕಟ್‌ನಲ್ಲಿ ಮರಳಿ ಆರಂಭಿಕ ಬ್ಯಾಟ್ಸ್ಮನ್‌ ಆಗಿ ಆಡಲು ಮಯಾಂಕ್ ಅಗರ್ವಾಲ್‌ ಇದೀಗ ತಾಳ್ಮೆಯಿಂದ ಕಾಯುವ ಅಗತ್ಯವಿದೆ ಎಂದು ಮಾಜಿ ಓಪನರ್‌ ಗೌತಮ್ ಗಂಭೀರ್‌ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ತಂಡ ಈಗ ತಾಯ್ನಾಡಿನಲ್ಲಿ ಪ್ರವಾಸಿ ಇಂಗ್ಲೆಂಡ್‌ ಎದುರು ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದ್ದು, ಮೊದಲ ಎರಡು ಪಂದ್ಯಗಳು ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆ ಆಗಲಿವೆ. ಪ್ರಥಮ ಟೆಸ್ಟ್‌ ಫೆ.5ರಂದು ಆರಂಭವಾಗಲಿದೆ.

ಕಳೆದ ಅವಧಿಯಲ್ಲಿ ತಾಯ್ನಾಡಿನಲ್ಲಿ ಮಯಾಂಕ್‌ ಆಡಿದ 5 ಟೆಸ್ಟ್‌ ಪಂದ್ಯಗಳಲ್ಲಿ 99.50ರ ಸರಾಸರಿಯೊಂದಿಗೆ ಬ್ಯಾಟ್‌ ಬೀಸಿ 2 ದ್ವಿಶತಕ ಮತ್ತೊಂದು ಶತಕ ಸೇರಿದಂತೆ ಒಟ್ಟು 597 ರನ್‌ಗಳನ್ನು ಚೆಚ್ಚಿದ್ದರು. ಆದರೆ, ಈ ವರ್ಷ ತವರು ನೆಲದಲ್ಲಿ ಅವರಿಗೆ ಅವಕಾಶ ಸಿಗದೇ ಇರುವುದು ದುರದೃಷ್ಟವೇ ಸರಿ.

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಎರಡು ಟೆಸ್ಟ್‌ಗಳಲ್ಲಿ ಆರಂಭಿಕನಾಗಿ ಆಡುವ ಅವಕಾಶ ಪಡೆದಿದ್ದ ಮಯಾಂಕ್ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಅವರ ಸ್ಥಾನದಲ್ಲಿ ಆರಂಭಿಕನಾಗಿ ಆಡಿದ ಶುಭಮನ್‌ ಗಿಲ್‌ 2 ಅರ್ಧಶತಕ ಬಾರಿಸುವ ಮೂಲಕ ನೂತನ ಓಪನರ್‌ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

“ಕ್ರೀಡೆಯಲ್ಲಿ ಇದು ಸಾಮಾನ್ಯ. ಜೀವನ ಕೂಡ ಇದೇ ಆಗಿದೆ. ನೀವು ಉತ್ತಮ ಆರಂಭ ಪಡೆಯದೇ ಇದ್ದರೆ ಅದು ಮತ್ತೊಬ್ಬರಿಗೆ ಅವಕಾಶ ಸೃಷ್ಟಿಸುತ್ತದೆ. ಆ ಆಟಗಾರ ಉತ್ತಮ ಪ್ರದರ್ಶನ ನೀಡಿದರೆ, ನೀವು ಮರಳಿ ನಿಮ್ಮ ಅವಕಾಶಕ್ಕಾಗಿ ಕಾಯುವಂತ್ತಾಗುತ್ತದೆ. ಸದ್ಯಕ್ಕಂತೂ ಮಯಾಂಕ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶವಿಲ್ಲ. ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ಸಿಕ್ಕಾಗ ಮಯಾಂಕ್ ರನ್ ಹೊಳೆಯೇ ಹರಿಸಿದ್ದಾರೆ ಎಂಬುದೂ ನಿಜ,” ಎಂದು ಸ್ಟಾರ್‌ ಸ್ಪೋರ್ಟ್ಸ್‌ನ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಗಂಭೀರ್‌ ಹೇಳಿದ್ದಾರೆ.

“ಆದರೆ ಅವರು ಆಸ್ಟ್ರೇಲಿಯಾಗೆ ತೆರಳಿದಾಗ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, ಗಿಲ್‌ ಅವರೊಟ್ಟಿಗೆ ಆಡಿ ಸೈ ಎನಿಸಿಕೊಂಡರು. ಹೀಗಾಗಿ ಮಯಾಂಕ್ ತಮ್ಮ ಅವಕಾಶಕ್ಕಾಗಿ ಕಾಯುವ ಸ್ಥಿತಿ ತಂದುಕೊಂಡಿದ್ದಾರೆ. ತಂಡದ ಮ್ಯಾನೇಜ್ಮೆಂಟ್‌ ಮಯಾಂಕ್‌ ಅವರನ್ನು ಉಳಿಸಿಕೊಂಡು ಅವರ ಬಗ್ಗೆ ಗಮನ ನೀಡಲಿದೆ ಎಂಬ ವಿಶ್ವಾಸವಿದೆ,” ಎಂದಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಮಯಾಂಕ್‌ 19 ಇನಿಂಗ್ಸ್‌ಗಳಿಂದ ಒಟ್ಟು 848 ರನ್‌ಗಳನ್ನು ಗಳಿಸುವ ಮೂಲಕ ಎರಡನೇ ಅತ್ಯಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ 959 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ (705) ಮೂರನೇ ಸ್ಥಾನದಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...