ಕೋಲಾರ: ಸೇನೆಯಿಂದ ನಿವೃತ್ತಿ ಹೊಂದಿದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.
ದೇಶದ ಸೇವೆ ಮುಗಿಸಿ ನಿವೃತ್ತಿಯಾಗಿ ಊರಿಗೆ ಬಂದವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಆದರೆ ಮರುದಿನ ಇವರ ನೆನೆಪು ಮಾತ್ರ ಉಳಿಯುವಂತಾಗಿದೆ. ಮೃತ ಮಂಜುನಾಥ್ ಅವರು ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿಯ ಕೊಡಗುರ್ಕಿ ಗ್ರಾಮದ ನಿವಾಸಿಯಾಗಿದ್ದಾರೆ. ದೇಶದ ಗಡಿಯಲ್ಲಿ 17 ವರ್ಷಗಳ ಕಾಲ ವೀರಯೋಧನಾಗಿ ಭಾರತಾಂಬೆ ಸೇವೆ ಮಾಡಿ ತಮ್ಮ ಊರಿಗೆ ಮರಳಿದ್ದರು. ಆದರೆ ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಜನವರಿ 31 ರಂದು ಅಂದ್ರೆ ಒಂದು ದಿನದ ಮುಂಚೆ ನಿವೃತ್ತಿಯಾಗಿದ್ದರು. ಸಾವಿರಾರು ಕನಸುಗಳನ್ನ ಹೊತ್ತು ಕುಟುಂಬದ ಜೊತೆಗೆ ಕಾಲ ಕಳೆಯಲು ಆಸೆಯನ್ನು ಹೊತ್ತು ಬಂದಿದ್ದರು. ಕೋಲಾರ ನಗರದ ಅಂಬೇಡ್ಕರ್ ನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮುಂಜುನಾಥ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ವೀರಯೋಧ ಮಂಜುನಾಥ್ ಅವರು ಇಬ್ಬರು ಮಕ್ಕಳು, ಪತ್ನಿ, ಕುಟುಂಬ ಮತ್ತು ಅಪಾರ ಸ್ನೇಹಿತರನ್ನ ಅಗಲಿದ್ದಾರೆ.