ರೋಹಿತ್ ಶರ್ಮಾ ಬದಲು‌ ಅಗರ್ ವಾಲ್ ಓಪನಿಂಗ್ ಬರಲಿ..!

Date:

ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ವೈಫಲ್ಯತೆ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕ್ರಿಕೆಟ್‌ ಅಭಿಮಾನಿಗಳು ಟ್ವಿಟರ್‌ನಲ್ಲಿ ಹಿರಿಯ ಬ್ಯಾಟ್ಸ್‌ಮನ್ ಮೇಲೆ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ರೋಹಿತ್‌ ಶರ್ಮಾ, ಜೋಫ್ರ ಆರ್ಚರ್‌ ಎಸೆತದಲ್ಲಿ ಮನಮೋಹಕ ಫ್ಲಿಕ್‌ ಮೂಲಕ ಬೌಂಡರಿ ಗಳಿಸಿದ್ದರು. ಆ ಮೂಲಕ ಆರು ರನ್‌ ಗಳಿಸಿ ಆಡುತ್ತಿದ್ದರು. ಆದರೆ, ಮರು ಎಸತದಲ್ಲೇ ಆಫ್‌ ಸ್ಟಂಪ್‌ನಿಂದ ಆಚೆಗಿದ್ದ ಚೆಂಡನ್ನು ಮುಟ್ಟಿದ ಹಿಟ್‌ಮ್ಯಾನ್‌ ವಿಕೆಟ್‌ಕೀಪರ್‌ ಜೋಸ್‌ ಬಟ್ಲರ್‌ ಕೈಗೆ ಚೆಂಡನ್ನು ಸೇರಿಸಿಬಿಟ್ಟರು. ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ರೋಹಿತ್‌ ವಿರುದ್ಧ ಅಸಮಾಧಾನದ ಅಲೆ ಸ್ಫೋಟಗೊಂಡಿದ್ದು, ಸಾಲು ಸಾಲು ಮೀಮ್ಸ್‌ಗಳ ಮೂಲಕ ಸ್ಟಾರ್‌ ಓಪನರ್‌ನ ಟ್ರೋಲ್ ಮಾಡಲಾಗಿತ್ತು.

ಇನ್ನು ಪಂದ್ಯದಲ್ಲಿ ಭಾರತ ತಂಡ 13 ಓವರ್‌ಗಳ ಮುಕ್ತಾಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 39 ರನ್‌ ಗಳಿಸಿದ್ದು, ಗೆಲುವಿಗೆ 381 ರನ್‌ ಅಗತ್ಯವಿದೆ. ಭಾರತ ತಂಡಕ್ಕೆ ಗುರಿ ಮುಟ್ಟಲು ಇನ್ನೂ ಒಂದು ದಿನ ಬಾಕಿಯಿದ್ದು ಒಂಬತ್ತು ವಿಕೆಟ್‌ಗಳ ಕೈಯಲ್ಲಿದೆ. ನಾಲ್ಕನೇ ದಿನದ ಕೊನೆಯ ಸೆಷನ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ಶುಭಮನ್ ಗಿಲ್‌ (15*) ಹಾಗೂ ಚೇತೇಶ್ವರ್‌ ಪೂಜಾರ(12*) ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಈ ಮೊತ್ತವನ್ನು ಅಂತಿಮ ದಿನ ತಲುಪುವುದು ಭಾರತದ ಪಾಲಿಗೆ ಅಷ್ಟೊಂದು ಸುಲಭವಲ್ಲ. ಒಂದು ವೇಳೆ ಈ ಗುರಿಯನ್ನು ಕೊಹ್ಲಿ ಪಡೆ ಯಶಸ್ವಿಯಾಗಿ ಚೇಸ್‌ ಮಾಡಿದ್ದೇ ಆದಲ್ಲಿ ಇದು ಭಾರತದ ಪಾಲಿಗೆ ಸ್ಮರಣೀಯ ಜಯವಾಗಲಿದೆ.

ಕಳೆದ ಆಸ್ಟ್ರೇಲಿಯಾ ಸರಣಿಯ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿಯೂ ಭಾರತ ತಂಡಕ್ಕೆ ಕೊನೆಯ ದಿನ ದಾಖಲೆಯ ಗುರಿ ಇತ್ತು. ಆದರೂ, ಅಂದಿನ ದಿನ ಅದ್ಭುತ ಬ್ಯಾಟಿಂಗ್‌ ಮಾಡಿದ್ದ ಭಾರತದ ಯುವ ಪಡೆ ಐತಿಹಾಸಿಕ ಜಯ ಸಾಧಿಸಿತ್ತು. ಇದೇ ಹಾದಿಯನ್ನು ಟೀಮ್‌ ಇಂಡಿಯಾ ಮಂಗಳವಾರ ಅನುಸರಿಸಿದರೆ ಗೆಲುವು ಖಚಿತ.

ಇದಕ್ಕೂ ಮುನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಆರ್‌ ಅಶ್ವಿನ್‌ ಸ್ಪಿನ್‌ ಮೋಡಿಯಿಂದ ಇಂಗ್ಲೆಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 178 ರನ್‌ಗೆ ಆಲೌಟ್‌ ಆಗಿತ್ತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ 241 ರನ್‌ ಮುನ್ನಡೆ ಲಾಭ ಪಡೆದ ಇಂಗ್ಲೆಂಡ್‌ ಭಾರತಕ್ಕೆ 420 ರನ್‌ ಗುರಿ ನೀಡಿತು. ಇಂಗ್ಲೆಂಡ್‌ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಜೋ ರೂಟ್‌(40), ಒಲ್ಲಿ ಪೋಪ್‌(28), ಜೋಸ್‌ ಬಟ್ಲರ್‌ (24) ಹಾಗೂ ಡಾಮ್ ಬೆಸ್‌ (25) ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತರೂ ದೊಡ್ಡ ಇನಿಂಗ್ಸ್‌ ಕಟ್ಟಲು ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಅದ್ಭುತ ಸ್ಪಿನ್‌ ಬೌಲಿಂಗ್‌ ಮಾಡಿದ ಆರ್‌ ಅಶ್ವಿನ್‌ 61 ರನ್‌ ನೀಡಿ ಆರು ವಿಕೆಟ್‌ ಸಾಧನೆ ಮಾಡಿದರು. ಇವರಿಗೆ ಸಾಥ್‌ ನಿಡಿದ ಶಹ್ಬಾಝ್‌ ನದೀಮ್‌ ಎರಡು ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ ಹಾಗೂ ಜಸ್‌ಪ್ರಿತ್‌ ಬುಮ್ರಾ ತಲಾ ಒಂದೊಂದು ವಿಕೆಟ್‌ ಕಿತ್ತರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...