ಟೀಂ ಇಂಡಿಯಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ತಂಡದಲ್ಲಿ ಎರಡೂ ಬಣಗಳು ಹುಟ್ಟಿಕೊಂಡಿವೆ ಎರಡೂ ಬಣಗಳ ನಡುವೆ ಆಗಾಗ ವಾಗ್ವಾದ ನಡೆಯುತ್ತಿರುತ್ತವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಸಹ ರೋಹಿತ್ ಶರ್ಮಾ ಅವರನ್ನ ಇಂಜುರಿ ಕಾರಣ ನೀಡಿ ತಂಡಕ್ಕೆ ಸೇರಿಸಿಕೊಳ್ಳದೇ ಇದ್ದದ್ದು ಈ ರೀತಿಯ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಅದರ ನಂತರ ಇದೀಗ ಮತ್ತೊಮ್ಮೆ ಅಹಿತಕರ ಘಟನೆಯೊಂದು ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯಗೊಳಿಸಿ ಡ್ರೆಸಿಂಗ್ ರೂಮ್ ನತ್ತ ಬರುತ್ತಿದ್ದ ಟೀಮ್ ಇಂಡಿಯಾ ಆಟಗಾರರನ್ನು ಸ್ವಾಗತಿಸಲು ಸಿರಾಜ್ ಅವರು ಬಾಗಿಲಲ್ಲಿ ನಿಂತಿದ್ದರು. ಈ ವೇಳೆ ಮೊಹಮ್ಮದ್ ಸಿರಾಜ್ ಅವರು ಕುಲ್ ದೀಪ್ ಯಾದವ್ ಅವರ ಕೊರಳ ಪಟ್ಟಿ ಹಿಡಿದದ್ದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಹೌದು ಮೊಹಮ್ಮದ್ ಸಿರಾಜ್ ಮತ್ತು ಕುಲ್ ದೀಪ್ ಯಾದವ್ ಇಬ್ಬರೂ ಸಹ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿಲ್ಲ ಬದಲಾಗಿ ವಾಟರ್ ಬಾಯ್ ಗಳಾಗಿ ಬೆಂಚ್ ಕಾಯುತ್ತಿದ್ದರು. ಚೆನ್ನಾಗಿಯೇ ಇದ್ದ ಇಬ್ಬರ ನಡುವೆ ಈ ರೀತಿಯ ವಾಗ್ವಾದ ಯಾಕೆ ನಡೆಯಿತು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಇದು ತಮಾಷೆಯಾಗಿ ನಡೆದದ್ದ ಅಥವಾ ನಿಜವಾಗಿಯೂ ಸಿರಾಜ್ ಅವರು ಕುಲ್ದೀಪ್ ಯಾದವ್ ಅವರ ಕೊರಳ ಪಟ್ಟಿ ಹಿಡಿದು ವಾಗ್ವಾದ ನಡೆಸಿದರಾ ಎಂಬುದನ್ನ ಟೀಮ್ ಇಂಡಿಯಾ ಸ್ಪಷ್ಟಪಡಿಸಬೇಕಿದೆ…