RCB ಸೇರಿದ ಮ್ಯಾಕ್ಸ್ ವೆಲ್ – ಫ್ಯಾನ್ಸ್ ಪ್ರತಿಕ್ರಿಯೆ ಹೇಗಿದೆ?

Date:

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ 14.25 ಕೋಟಿ ರೂ.ಗಳಿಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತು. ಆ ಮೂಲಕ ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್ ಜತೆಗೆ ಹಾರ್ಡ್ ಹಿಟ್ಟರ್‌ ಸೇರ್ಪಡೆಯಾದರು.

ಕಳೆದ ವರ್ಷದ ಹರಾಜಿನಲ್ಲಿ 10.75 ಕೋಟಿ ರೂ. ಗಳಿಗೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಫ್ರಾಂಚೈಸಿ ಪಾಲಾಗಿದ್ದ ಹಾರ್ಡ್‌ ಹಿಟ್ಟರ್‌, ಈ ಬಾರಿ ಮಿನಿ ಹರಾಜಿನಲ್ಲಿ ನಾಲ್ಕು ಕೋಟಿ ಜಾಸ್ತಿ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಧ್ವಂಸಕ ಬ್ಯಾಟ್ಸ್‌ಮನ್‌ ಎಂದೇ ಗುರುತಿಸಿಕೊಂಡಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅಂಥದ್ದೇ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ 2020 ಟೂರ್ನಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆಡಿದ್ದ ಅವರು 11 ಇನಿಂಗ್ಸ್‌ಗಳಿಂದ ಕೇವಲ 108 ರನ್‌ಗಳನ್ನು ಮಾತ್ರವೇ ಗಳಿಸಿದ್ದರು.

ಇದೇ ಕಾರಣಕ್ಕೆ ಪಂಜಾಬ್‌ ತಂಡ ಕೊನೆಗೂ ತನ್ನ ಸ್ಟಾರ್‌ ಆಟಗಾರನನ್ನು ಹೊರದಬ್ಬಿದೆ. ಇನ್ನು 2014ರ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಪರ 500ಕ್ಕೂ ಹೆಚ್ಚು ರನ್‌ಗಳಿಸಿ ಫೈನಲ್‌ಗೆ ಕೊಂಡೊಯ್ದುದ್ದನ್ನು ಬಿಟ್ಟರೆ ಬೇರೆ ಯಾವ ಆವೃತ್ತಿಗಳಲ್ಲೂ ಮ್ಯಾಕ್ಸ್‌ವೆಲ್‌ ಸದ್ದು ಮಾಡಿಲ್ಲ ಎಂಬುದು ಅಚ್ಚರಿಯೇ ಸರಿ.

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಆರ್‌ಸಿಬಿಯಲ್ಲಿ ಒಟ್ಟಿಗೆ ಆಡುವುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಟ್ವಿಟರ್‌ನಲ್ಲಿ ತೇಲಾಡುತ್ತಿದ್ದಾರೆ. ಈ ಮೂವರು ಆಟಗಾರರಿಂದ 2021ರ ಐಪಿಎಲ್ ನಿರೀಕ್ಷೆಗಳು ಗಗನಕ್ಕೇರಿವೆ.

ಕಳೆದ ಆವೃತ್ತಿಯಲ್ಲಿ ಆಡಿದ್ದ 13 ಪಂದ್ಯಗಳಿಂದ ಆಲ್‌ರೌಂಡರ್‌ ಕೇವಲ 108 ರನ್‌ ಮಾತ್ರ ಗಳಿಸಿದ್ದರು ಹಾಗೂ ಅವರ ಬ್ಯಾಟ್‌ ಇಂದ ಒಂದೂ ಸಿಕ್ಸ್‌ ಮೂಡಿಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರಾಸೆಗೆ ಒಳಗಾಗಿದ್ದ ಪಂಜಾಬ್‌ ಫ್ರಾಂಚೈಸಿ 2021ರ ಹರಾಜಿಗೆ ಮ್ಯಾಕ್ಸ್‌ವೆಲ್‌ರನ್ನು ಬಿಡುಗಡೆ ಮಾಡಿತ್ತು.

ಐಪಿಎಲ್‌ ಮುಗಿಸಿಕೊಂಡು ಆಸ್ಟ್ರೇಲಿಯಾ ತಂಡಕ್ಕೆ ಮರಳಿದ್ದ ಮ್ಯಾಕ್ಸ್‌ವೆಲ್‌, ಭಾರತ ವಿರುದ್ಧ ಓಡಿಐ ಸರಣಿಯಲ್ಲಿ 83.50ರ ಸರಾಸರಿಯಲ್ಲಿ ರನ್‌ ಸಿಡಿಸಿದ್ದರು. ಜತೆಗೆ 2020-21ರ ಆವೃತ್ತಿಯ ಬಿಗ್‌ಬ್ಯಾಷ್‌ ಲೀಗ್‌ನಲ್ಲಿಯೂ 379 ರನ್‌ ಚೆಚ್ಚಿದ್ದರು.

ಆಸ್ಟ್ರೇಲಿಯಾ ಸ್ಟಾರ್‌ ಆಟಗಾರ ಆರ್‌ಸಿಬಿಗೆ ಸಹಿ ಮಾಡಿರುವ ಹಿನ್ನೆಲೆಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲಿನ ಹೊರೆ ಸ್ವಲ್ಪ ಕಡಿಮೆಯಾಗಲಿದೆ. ಮುಂದಿನ ಆವೃತ್ತಿಯಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಳ್ಳಲು ಈ ಮೂವರು ಆಟಗಾರರು ನೆರವಾಗುವ ಸಾಧ್ಯತೆ ಇದೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...