ಕುತೂಹಲ ಮೂಡಿಸಿದ ಗುಂಡ್ಕಲ್ ಪೋಸ್ಟ್

Date:

ಕಿಚ್ಚ ಸುದೀಪ್‌ ಅವರ ನಿರೂಪಣೆಯಲ್ಲಿ ಫೆ.28ರಂದು ಅದ್ದೂರಿಯಾಗಿ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 8’ ಆರಂಭ ಆಗಲಿದೆ. ಈ ಬಾರಿ ಯಾರೆಲ್ಲ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದ್ದು, ಈಗಾಗಲೇ ಅನೇಕರ ಹೆಸರುಗಳು ಓಡಾಡುತ್ತಿವೆ. ಈ ನಡುವೆ ‘ಕಲರ್ಸ್‌ ಕನ್ನಡ’ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಕೆಲವು ವಿಚಾರಗಳು ಕೌತುಕ ಮೂಡಿಸಿವೆ. ಪರಮ್‌ ಅವರ ಪೋಸ್ಟ್‌ ಹೀಗಿದೆ…

‘ಗೆಲ್ಲಬೇಕು ಅಂದುಕೊಂಡಿರುವ ಕೋಚ್ ಯಾವಾಗಲೂ ತಂಡದ ಬಗ್ಗೆ ಯೋಚನೆ ಮಾಡುತ್ತಾನೆ. ತನಗೆ ಇಷ್ಟ ಅಂತ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಇರುವ ಕೋಚ್‌ಗೆ ಇಲ್ಲ. ಐದು ಜನ ಬ್ಯಾಟ್ಸ್‌ಮನ್‌ಗಳು, ಒಬ್ಬ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌, ಮೂರು ಜನ ವೇಗದ ಬೌಲರುಗಳು. ಇಬ್ಬರು ಸ್ಪಿನ್ನರುಗಳು. ಒಟ್ಟೂ ಹನ್ನೊಂದು ಜನ. ಈ ಕಾಂಬಿನೇಷನ್ ಸನ್ನಿವೇಶಕ್ಕೆ ತಕ್ಕಂತೆ, ಆಡೋ ಜಾಗಕ್ಕೆ ತಕ್ಕಂತೆ, ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾಗಬಹುದು. ಆಡುವ ಹನ್ನೊಂದರಲ್ಲಿ ಇಲ್ಲದ ಹನ್ನೆರಡನೆಯವನಿಗೆ ತಂಡದಲ್ಲಿ ಇರಲು ನನಗೆ ಹೆಚ್ಚು ಅರ್ಹತೆ ಇತ್ತು ಅಂತ ಅನಿಸುವುದು ಸಹಜ. ಅದು ಜೀವನ.

‘ಮನೇಲಿ ಕೂತು ಆರಾಮಾಗಿ ಮ್ಯಾಚ್ ನೋಡುವ ನಮಗೆ ಕೋಚ್ ಮಾಡಿದ್ದೆಲ್ಲಾ ತಪ್ಪು ಅನಿಸುವುದೂ ಇದೆ. ಟಾಸ್ ಗೆದ್ದರೆ ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಅನ್ನುವ ತೀರ್ಮಾನ ತೆಗೆದುಕೊಳ್ಳುವ ಅರ್ಹತೆ ಸೋಫಾದಲ್ಲಿ ಕುಳಿತು ನೋಡುವ ನಮಗಿಂತ (ಅಂಥವರಲ್ಲಿ ನನ್ನಂಥ ಎಷ್ಟೋ ಜನ ಹೆಚ್ಚೆಂದರೆ ಟೆನಿಸ್ ಬಾಲಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡಿ ಅನುಭವ ಇದ್ದವರು) ಬಹುಶಃ ಫೀಲ್ಡಿನಲ್ಲಿ ಇಳಿದು ಆಡುವ ಕ್ಯಾಪ್ಟನ್ನಿಗೆ ಅಥವಾ ಅವನನ್ನು ರೂಪಿಸುವ ಕೋಚ್ ಗೆ ಹೆಚ್ಚಿರುತ್ತದೆ.

‘ಮನೇಲಿ ಕೂತು ಆರಾಮಾಗಿ ಮ್ಯಾಚ್ ನೋಡುವ ನಮಗೆ ಕೋಚ್ ಮಾಡಿದ್ದೆಲ್ಲಾ ತಪ್ಪು ಅನಿಸುವುದೂ ಇದೆ. ಟಾಸ್ ಗೆದ್ದರೆ ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಅನ್ನುವ ತೀರ್ಮಾನ ತೆಗೆದುಕೊಳ್ಳುವ ಅರ್ಹತೆ ಸೋಫಾದಲ್ಲಿ ಕುಳಿತು ನೋಡುವ ನಮಗಿಂತ (ಅಂಥವರಲ್ಲಿ ನನ್ನಂಥ ಎಷ್ಟೋ ಜನ ಹೆಚ್ಚೆಂದರೆ ಟೆನಿಸ್ ಬಾಲಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡಿ ಅನುಭವ ಇದ್ದವರು) ಬಹುಶಃ ಫೀಲ್ಡಿನಲ್ಲಿ ಇಳಿದು ಆಡುವ ಕ್ಯಾಪ್ಟನ್ನಿಗೆ ಅಥವಾ ಅವನನ್ನು ರೂಪಿಸುವ ಕೋಚ್ ಗೆ ಹೆಚ್ಚಿರುತ್ತದೆ.

‘ಆಯ್ಕೆಯನ್ನು ಕೆಟ್ಟ ಶಬ್ದ ಬಳಸಿ ನಿಂದಿಸುವವರು ಆಟವನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ ಅಂದುಕೊಳ್ಳೋಣ. ಕೆಟ್ಟ ಶಬ್ದ ಬಳಸುವುದು ಅವರ ವ್ಯಕ್ತಿತ್ವ. ಸುತ್ತಲೂ ನಿಂದಕರು ಇರಬೇಕು ಅನ್ನುವುದು ಎಲ್ಲರೂ ರೂಢಿಸಿಕೊಳ್ಳಲೇಬೇಕಾದ ಸಂಸ್ಕಾರ. ಪಂದ್ಯಕ್ಕೆ ಮೊದಲಿನ ತಳಮಳ ಆಡುವವರಿಗೆ ಹೆಚ್ಚೋ ನೋಡುವವರಿಗೆ ಹೆಚ್ಚೋ? ಹಿಂಜರಿಕೆ ಅನ್ನೋದು ಸಂಕೋಚದಿಂದ ಬರುತ್ತಾ, ಆತ್ಮವಿಶ್ವಾಸದ ಕೊರತೆಯಿಂದ ಬರುತ್ತಾ ಅಥವಾ ಆಟ ಎಷ್ಟು ದೊಡ್ಡದು ಎಂಬ ಗೌರವದಿಂದ ಬರುತ್ತಾ? ಗೊತ್ತಿಲ್ಲ. Preparing, with nervousness, few days to go…’ ಎಂದು ಪರಮೇಶ್ವರ್‌ ಗುಂಡ್ಕಲ್‌ ಬರೆದುಕೊಂಡಿದ್ದಾರೆ.

ಈ ಫೇಸ್‌ಬುಕ್‌ ಪೋಸ್ಟ್‌ಗೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಈಗಾಗಲೇ ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್‌, ‘ಸಿಲ್ಲಿ ಲಲ್ಲಿ’ ರವಿಶಂಕರ್‌, ‘ಸರಿಗಮಪ’ ಹನುಮಂತ, ‘ಎಕ್ಸ್‌ಕ್ಯೂಸ್‌ ಮೀ’ ಸುನೀಲ್‌ ರಾವ್‌ ಮುಂತಾದವರ ಹೆಸರುಗಳು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿವೆ. ಅಂತಿಮವಾಗಿ ಯಾರೆಲ್ಲ ಈ ಬಾರಿ ಬಿಗ್‌ ಬಾಸ್‌ ಮನೆ ಸೇರಿಕೊಳ್ಳುತ್ತಾರೆ ಎಂಬ ಕೌತುಕಕ್ಕೆ ಫೆ.28ರಂದು ತೆರೆ ಬೀಳಲಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...