ಟಿಕ್ ಟಾಕ್ ಅಪ್ಲಿಕೇಶನ್ ಬ್ಯಾನ್ ಆದ ಬಳಿಕ ಕೆಲವೊಂದಷ್ಟು ಟಿಕ್ ಟಾಕ್ ಮಾಡುವ ಯುವಕ ಮತ್ತು ಯುವತಿಯರು ಡಿಪ್ರೆಷನ್ ಗೆ ಒಳಗಾಗಿದ್ದಾರೆ. ಇನ್ನೂ ಕೆಲವು ಯುವಕ ಮತ್ತು ಯುವತಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಟಿಕ್ ಟಾಕ್ ಮಾಡುತ್ತಿದ್ದ ಯುವಕ ಮತ್ತು ಯುವತಿಯರ ಕೆಲವೊಂದಷ್ಟು ಆತ್ಮಹತ್ಯೆ ಸುದ್ದಿಗಳು ನಮ್ಮ ಕಿವಿಗೆ ಬಿದ್ದಿದ್ದವು.
ಅದೇ ರೀತಿ ಇದೀಗ ಮತ್ತೊಬ್ಬ ಟಿಕ್ ಟಾಕ್ ಕಲಾವಿದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೌದು ಮುಂಬೈ ಮೂಲದ ಸಮೀರ್ ಗಾಯಕ್ ವಾಡ್ ಎಂಬ ಇಪ್ಪತ್ತೊಂದು ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ವಿಡಿಯೊಗಳನ್ನು ಮಾಡುತ್ತಿದ್ದ ಸಮೀರ್ ಗಾಯಕ್ವಾಡ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಸಮೀರ್ ಗಾಯಕ್ವಾಡ್ ನಿಧನ ಆತನ ಗೆಳೆಯರ ಬಳಗಕ್ಕೆ ಶಾಕಿಂಗ್ ನ್ಯೂಸ್ ಆಗಿದ್ದು ಆತ ಯಾಕೆ ಆತ್ಮಹತ್ಯೆಗೆ ಶರಣಾದ ಎಂಬ ವಿಷಯ ಯಾರಿಗೂ ಅರ್ಥವಾಗುತ್ತಿಲ್ಲ. ಗೆಳೆಯರೊಂದಿಗೆ ಚೆನ್ನಾಗಿಯೇ ಇದ್ದ ಸಮೀರ್ ಗಾಯಕ್ವಾಡ್ ದಿಡೀರ್ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಅನುಮಾನ ಮೂಡುವಂತಾಗಿದೆ. ಈ ಸಾವಿನ ಪ್ರಕರಣವನ್ನ ಇದೀಗ ಪೊಲೀಸರು ಕೈಗೆತ್ತಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.