ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದೆ ಯಾವ ನಾಯಕ ನಟನೂ ಇಲ್ಲ, ಯಾವ ಹಿರಿಯ ಕಲಾವಿದನೂ ಇಲ್ಲ, ದರ್ಶನ್ ಮಾತ್ರ ನಂಬರ್ ಒನ್ ಅವರ ಬಗ್ಗೆ ಯಾರು ಏನೇ ಮಾತನಾಡಿದರೂ , ಅವರು ಎಷ್ಟೇ ದೊಡ್ಡ ಕಲಾವಿದರಾದರು ಸರಿ ಅವರನ್ನ ಮಾತ್ರ ಸುಮ್ಮನೆ ಬಿಡುವುದಿಲ್ಲ.. ಇದು ನಾವು ಹೇಳುತ್ತಿರುವ ಡೈಲಾಗ್ ಅಲ್ಲ ಸ್ವತಃ ಎಷ್ಟೋ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಜಗ್ಗೇಶ್ ಅವರ ಎದುರುಗಡೆ ಹೇಳಿದ ಫಿಲ್ಮಿ ಡೈಲಾಗ್..!
ನಟ ದರ್ಶನ್ ಅವರು ನವರಸ ನಾಯಕ ಜಗ್ಗೇಶ್ ಅವರ ಎದುರು ಮಾತನಾಡುವಾಗ ಕೈಕಟ್ಟುಕೊಂಡು ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು ಆ ರೀತಿ ಇರುತ್ತಾರೆ. ಆದರೆ ಕೆಲ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರ ಚಿತ್ರೀಕರಣದ ಸ್ಥಳಕ್ಕೆ ಹೋಗಿ ಮಾಡಿದ್ದೇನು? ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ ಎಂಬ ಅಹಂಕಾರದಿಂದ ಆ ಒಂದಷ್ಟು ಅಭಿಮಾನಿಗಳು ಈ ರೀತಿ ಮಾಡಿದ್ರಾ? ಮುಂದೆ ಬೇರೆ ಯಾವುದೇ ದೊಡ್ಡ ಕಲಾವಿದ ದರ್ಶನ್ ಅವರ ಬಗ್ಗೆ ಮಾತನಾಡಿದರೆ ಇದೇ ರೀತಿ ಪ್ರತಿಕ್ರಿಯಿಸುತ್ತಾರಾ? ದರ್ಶನ್ ಅವರು ಅವರ ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಎಂಟ್ರಿ ಆಗುವಷ್ಟು ಫ್ರೀ ಬಿಟ್ಟಿದ್ದಾರಾ?
ಜಗ್ಗೇಶ್ ಅವರಿಗೆ ಕೈ ತೋರಿಸಿಕೊಂಡು ಏಕವಚನದಲ್ಲಿ ಮಾತನಾಡಿದಾಗ ಆ ಒಂದಷ್ಟು ಮಂದಿ ಜಗ್ಗೇಶ್ ಅವರು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ ಹುಟ್ಟೇ ಇರಲಿಲ್ಲ.. ಮಹಾನ್ ಅನುಭವ ಇರುವ ಹಿರಿಯ ಕಲಾವಿದ ನಿನ್ನೆ ಮೊನ್ನೆ ಚಿತ್ರ ನೋಡಲು ಶುರು ಮಾಡಿರುವ ಇವರೆಲ್ಲಿ? ಇಂತಹ ಕೆಲವೊಂದಿಷ್ಟು ಅಭಿಮಾನಿಗಳಿಂದ ದರ್ಶನ್ ಅವರ ಆದರ್ಶಗಳನ್ನು ಪಾಲಿಸುತ್ತಾ ಬರುತ್ತಿರುವ ನಿಜವಾದ ದರ್ಶನ್ ಅಭಿಮಾನಿಗಳಿಗೂ ಸಹ ಕೆಟ್ಟ ಹೆಸರು ಬಂದಿದೆ.
ಅವರೇನೂ ಅಭಿಮಾನಿಗಳ ಅಥವಾ ಹಿಟ್ಲರ್ ಸಂಸ್ಥಾನದ ಸೈನಿಕರಾ? ಇದೇನು ಕರ್ನಾಟಕವೋ ಅಥವಾ ಹಿಟ್ಲರ್ ಸಂಸ್ಥಾನವೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಜಗ್ಗೇಶ್ ಅವರ ಮೇಲೆ ನಡೆದ ಮುತ್ತಿಗೆಯ ವಿರುದ್ಧ ದನಿ ಎತ್ತಿದ್ದಾರೆ. ಹೌದು ಇದಕ್ಕೆಲ್ಲಾ ಕಾರಣ ಕೆಲವೊಂದಷ್ಟು ದರ್ಶನ್ ಅಭಿಮಾನಿಗಳು ಎಲ್ಲೆ ಮೀರಿ ನಡೆದುಕೊಂಡ ರೀತಿ. ಒಬ್ಬ ದೊಡ್ಡ ಕಲಾವಿದನಿಗೆ ತೋರಿದ ಅಗೌರವ ಮತ್ತು ನಡೆದುಕೊಂಡ ಕೆಟ್ಟ ರೀತಿ ಇದೀಗ ಇಡೀ ದರ್ಶನ್ ಅಭಿಮಾನಿಗಳ ಪಾಲಿಕೆ ಕಪ್ಪುಚುಕ್ಕೆಯಾಗಿದೆ.