ತೆಲುಗಿಗೆ ನಟ ರಕ್ಷಿತ್ ಶೆಟ್ಟಿ ಅವರು ಭರ್ಜರಿಯಾಗಿ ಎಂಟ್ರಿ ನೀಡಿ ಅಭಿಮಾನಿಗಳ ಮನಸ್ಸನ್ನ ಗೆಲ್ಲುತ್ತಿದ್ದಾರೆ. ಹೌದು ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರವೊಂದು ಇದೀಗ ತೆಲುಗಿನಲ್ಲಿ ತೆರೆಕಂಡು ಉತ್ತಮ ಅಭಿಪ್ರಾಯವನ್ನ ಪಡೆದುಕೊಳ್ಳುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಇದೀಗ ತೆಲುಗಿನಲ್ಲಿ ಅತಡೇ ಶ್ರೀಮನ್ನಾರಾಯಣ ಆಗಿ ಬಿಡುಗಡೆಯಾಗಿದೆ.
ಈ ಹಿಂದೆ ಒಟ್ಟಿಗೆ ನಾಲ್ಕೈದು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಿತ್ತು ಆ ಸಮಯದಲ್ಲಿ ತೆಲುಗಿನಲ್ಲಿಯೂ ಸಹಾ ಚಿತ್ರಮಂದಿರಕ್ಕೆ ಅತಡೇ ಶ್ರೀಮನ್ನಾರಯಣ ಲಗ್ಗೆ ಇಟ್ಟಿತ್ತು. ಆದರೆ ನಿರೀಕ್ಷೆಯಷ್ಟು ಅತಡೆ ಶ್ರೀಮನ್ನಾರಾಯಣ ರೀಚ್ ಆಗಿರಲಿಲ್ಲ.. ಇದೀಗ ಆಹಾ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಅತಡೆ ಶ್ರೀಮನ್ನಾರಾಯಣ ಬಿಡುಗಡೆಗೊಂಡಿತ್ತು ತೆಲುಗು ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ನಟನೆಗೆ ಮನಸೋತಿರುವ ತೆಲುಗು ಪ್ರೇಕ್ಷಕರು ಸಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಅತಡೆ ಶ್ರೀಮನ್ನಾರಾಯಣ ಒಂದೊಳ್ಳೆ ಚಿತ್ರ ಚಿತ್ರಮಂದಿರದಲ್ಲಿ ವೀಕ್ಷಿಸಬೇಕಿತ್ತು ರಕ್ಷಿತ್ ಶೆಟ್ಟಿ ಅವರ ಆ್ಯಕ್ಟಿಂಗ್ ಅಂತೂ ಸೂಪರ್ ಮೇಕಿಂಗ್ ಸಖತ್ತಾಗಿದೆ ಎಂದು ಕಾಮೆಂಟ್ ಗಳು ಕಂಡು ಬರುತ್ತಿವೆ.