ಧನುಶ್ರೀ ಬಿಗ್ ಬಾಸ್ ಗೆ ಬರಲು ಇವರೇ ಕಾರಣ!

Date:

ಧನುಶ್ರೀ ಈ ಬಾರಿಯ ಬಿಗ್ ಬಾಸ್ ಸೀಸನ್ ನ ಮೊದಲ ಸ್ಪರ್ಧಿ. ನಿಜ ಹೇಳಬೇಕೆಂದರೆ ಮೊದಲನೆಯ ಸ್ಪರ್ಧಿ ಧನುಶ್ರೀ ಎಂದು ಘೋಷಣೆ ಮಾಡಿದಾಗ ಈಕೆಯ ಮುಖವನ್ನು ನೋಡಿದವರಲ್ಲಿ ತೊಂಬತ್ತರಷ್ಟು ಜನರಿಗೆ ಈಕೆ ಯಾರು ಎಂಬುದೇ ತಿಳಿದಿರಲಿಲ್ಲ.. ಯಾಕೆಂದರೆ ಈಕೆ ಇನ್ಸ್ಟಾಗ್ರಾಮ್ ಮತ್ತು ಟಿಕ್ ಟಾಕ್ ನಲ್ಲಿ ಮಾತ್ರ ಫೇಮಸ್.

 

 

ಯಾವುದೇ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊಗಳ ಮೂಲಕ ಒಂದಷ್ಟು ಜನರನ್ನು ರೀಚ್ ಆಗಿದ್ದ ಧನುಶ್ರೀ ಅವರನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೆಲೆಕ್ಟ್ ಮಾಡಿದ್ದೇ ದೊಡ್ಡ ಪವಾಡ.  ಇನ್ನು ಧನುಶ್ರೀ ಮೂಲತಃ ಹಾಸನ ಜಿಲ್ಲೆಯವಳು. ಈ ಮೊದಲು ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡುವ ಮೂಲಕ ಟಿಕ್ ಟಾಕ್ ನಲ್ಲಿ ಕೊಂಚ ಹೆಸರನ್ನು ಮಾಡಿದ್ದ ಧನುಶ್ರೀ ಹೆಚ್ಚಾಗಿ ಪರಭಾಷೆಯ ಅದರಲ್ಲೂ ಇಂಗ್ಲಿಷ್ ಹಾಡುಗಳಿಗೆ ಟಿಕ್ ಟಾಕ್ ಮಾಡುತ್ತಿದ್ದಳು.

 

ಯಾರೋ ಹಾಡಿದ ಹಾಡಿಗೆ ಒಂದಷ್ಟು ಮೇಕಪ್ ಹಾಕಿಕೊಂಡು ಲಿಪ್ ಸಿಂಕ್ ಮಾಡಿ ಕುಣಿದು ಬಿಟ್ಟರೆ ಅದನ್ನು ಟಾಲೆಂಟ್ ಎನ್ನಲಾಗುವುದಿಲ್ಲ ಆದರೂ ಕೆಲವೊಂದಿಷ್ಟು ಮಂದಿಯ ಪ್ರಕಾರ ಅದು ಸೂಪರ್ ಟ್ಯಾಲೆಂಟ್ ಅಂತೆ..!  ಹೀಗೆ ಟಿಕ್ ಟಾಕ್ ನಲ್ಲಿ ಪಾಸಿಟಿವ್ ಕಾಮೆಂಟ್ ಗಳು ಬರಲು ಶುರುವಾದ ನಂತರ ಧನುಶ್ರೀ ಮತ್ತಷ್ಟು ವಿಡಿಯೋಗಳನ್ನ ಮಾಡಲು ಶುರುಮಾಡಿದಳು.

 

ಹೀಗೆ ಟಿಕ್ ಟಾಕ್ ಮಾಡಿಕೊಂಡಿದ್ದ ಧನುಶ್ರೀ ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಮತ್ತದೇ ತನ್ನ ಬೃಹತ್ ಟಾಲೆಂಟ್ ಪ್ರದರ್ಶಿಸಲು ಶುರು ಮಾಡಿದ್ದಳು. ಹೀಗೆ ಇನ್ ಸ್ಟಾಗ್ರಾಂನಲ್ಲಿ ರುವ ಕೆಲವೊಂದಷ್ಟು ಜನ ಆಕೆಯ ವಿಡಿಯೋಗಳನ್ನ ನೋಡುತ್ತಾ ಆ ವಿಡಿಯೋಗಳನ್ನು ಶೇರ್ ಮಾಡುತ್ತಾ ಆಕೆಯನ್ನು ಫೇಮಸ್ ಮಾಡಿಬಿಟ್ಟರು. ಇಷ್ಟು ಸಾಕಿತ್ತು ನೋಡಿ ಈಕೆಯನ್ನ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೆಲೆಕ್ಟ್ ಮಾಡಲು.

 

 

ಇಷ್ಟು ದಿನ ಸೆಲೆಬ್ರಿಟಿಗಳು ಅಥವಾ ಕಾಮನ್ ಮ್ಯಾನ್ ಗಳನ್ನು ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ಆ ಕಡೆ ಸೆಲೆಬ್ರಿಟಿಯೂ ಅಲ್ಲದ ಈ ಕಡೆ ಸಾಮಾನ್ಯ ವ್ಯಕ್ತಿಯೂ ಅಲ್ಲದ ಸ್ಪರ್ಧಿಯನ್ನು ಬಿಗ್ ಬಾಸ್ ಮನೆ ಒಳಗಡೆ ಕಳುಹಿಸಲಾಗಿದೆ..

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...