ಇಷ್ಟು ದಿನ ಟ್ರಾಫಿಕ್ ಪೋಲಿಸರ ಕಿರಿಕಿರಿಯಿಂದ ಬೇಸರಕ್ಕೆ ಒಳಗಾಗಿದ್ದ ವಾಹನ ಸವಾರರಿಗೆ ಇದೀಗ ಗೃಹ ಸಚಿವ ಬೊಮ್ಮಾಯಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಇನ್ನು ಮುಂದೆ ವಾಹನ ಸವಾರರನ್ನು ಅಡ್ಡ ಹಾಕಿ ಏಕಾಏಕಿ ವಾಹನದ ದಾಖಲೆಗಳನ್ನು ಕೊಡಿ ಎಂದು ಕೇಳುವಂತಿಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಅವರು ತಿಳಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್ ಎಂ ರಮೇಶ್ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು ಇನ್ನು ಮುಂದೆ ಏಕಾಏಕಿ ಪೊಲೀಸರು ಬಂದು ವಾಹನ ಸವಾರರನ್ನು ಅಡ್ಡಗಟ್ಟಿ ಡಾಕ್ಯುಮೆಂಟ್ ಕೇಳುವ ಕೆಲಸವನ್ನು ಮಾಡುವಂತಿಲ್ಲ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬೇಕು ಎಂದು ಹೇಳಿದರು.