ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಲು ಕಾರಣ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್. ಹೌದು ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದ ಸಂದರ್ಭದಲ್ಲಿ ನೆಲಕಚ್ಚಿ ನಿಂತು ಹೋರಾಡಿದ್ದು ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್.
ರಿಷಬ್ ಪಂತ್ ಸ್ಫೋಟಕ ಶತಕ ಸಿಡಿಸಿದರೆ ವಾಷಿಂಗ್ಟನ್ ಸುಂದರ್ ಅವರು 96 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಇಷ್ಟು ದೊಡ್ಡ ಮೊತ್ತ ಬಾರಿಸಿದರು ಸಹ ವಾಷಿಂಗ್ಟನ್ ಸುಂದರ್ ಅವರಿಗೆ ಮತ್ತು ಕ್ರೀಡಾಭಿಮಾನಿಗಳೆಲ್ಲರಿಗೂ ಸಹ ನಿರಾಸೆ ಉಂಟಾಗಿದೆ. ಇದಕ್ಕೆ ಕಾರಣ ವಾಷಿಂಗ್ಟನ್ ಸುಂದರ್ ಅವರು ಶತಕ ವಂಚಿತರಾದದ್ದು.
96 ರನ್ ಬಾರಿಸಿದ್ದ ವಾಷಿಂಗ್ಟನ್ ಸುಂದರ್ ಅವರು ಶತಕ ಬಾರಿಸಲಿದ್ದಾರೆ ಎಂದು ಎಲ್ಲರು ತಿಳಿದುಕೊಂಡಿದ್ದರು ಆದರೆ ಇಶಾಂತ್ ಶರ್ಮಾ ಮತ್ತು ಸಿರಾಜ್ ಅವರು ಯಾವುದೇ ರನ್ ಗಳಿಸದೆ ಔಟ್ ಆದ ಪರಿಣಾಮ ಭಾರತ ತಂಡ ಆಲೌಟ್ ಆಯಿತು ಹೀಗಾಗಿ ವಾಷಿಂಗ್ಟನ್ ಸುಂದರ್ ಅವರ ಶತಕದ ಕನಸು ನುಚ್ಚುನೂರಾಯಿತು. ವಾಷಿಂಗ್ಟನ್ ಸುಂದರ್ ಅವರು ಶತಕ ಬಾರಿಸಲಿ ಎಂದು ಕಾಯುತ್ತಿದ್ದ ಕ್ರೀಡಾಭಿಮಾನಿಗಳ ಮೊಗದಲ್ಲಿ ದೊಡ್ಡಮಟ್ಟದ ನಿರಾಸೆ ಮೂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಾಷಿಂಗ್ಟನ್ ಸುಂದರ್ ಅವರ ಕುರಿತು ಕ್ರಿಕೆಟ್ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ..