ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

Date:

ನಮ್ಮ ದೇಶದಲ್ಲಿ ಇಡೀ ತಿಂಗಳು ಕಷ್ಟಪಟ್ಟು ಕೆಲಸ ಮಾಡಿದ್ರೂ ಎಷ್ಟೋ ಕಡೆ ಅದಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. ಇನ್ನೂ ಕೆಲವು ಕಡೆ ಕೆಲಸಕ್ಕಾಗಿ ಅಲೆದಾಡಿದ್ರೂ ಕೆಲಸ ಸಿಗ್ತಿಲ್ಲ. ಆದ್ರೆ ಈ ದೇಶದಲ್ಲಿ ಕೆಲಸ ಮಾಡ್ಲೀ ಮಾಡದೇ ಇರಲಿ, ಆಗರ್ಭ ಶ್ರೀಮಂತನೇ ಆಗಿರಲಿ ಅಥವಾ ನಿರ್ಗತಿಕನಿಗೆ ಆಗಿರಲಿ ಅವನಿಗೆ ತಿಂಗಳ ಆದಾಯ ಖಡ್ಡಾಯವಾಗಿ ಸಿಗಲಿದೆ. ಹೌದು ಅಲ್ಲಿನ ಸರ್ಕಾರ ದೇಶದ ಪ್ರತಿಯೋರ್ವ ನಾಗರಿಕನಿಗೂ ಖಾತರಿ ಸಂಬಳ ನೀಡಲು ಯೋಜಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ

ಇಂತಹ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲು ಮುಂದಾಗಿರೋದು ಸ್ವಿಸ್‌ ಸರ್ಕಾರ. ಹೌದು ತನ್ನ ದೇಶದ ಪ್ರತಿಯೊಬ್ಬ ನಾಗರಿಕನಿಗೆ 2,500 ಯುಎಸ್‌‌ ಡಾಲರ್‌‌ ಸಂಬಳ,  ಭಾರತದ ಕರೆನ್ಸಿಯಲ್ಲಿ  ಸುಮಾರು 1 ಲಕ್ಷದ 70 ಸಾವಿರ ರೂಪಾಯಿ ವೇತನ ನೀಡಲು ಯೋಜನೆ ಸಿದ್ದಪಡಿಸಿದೆಯಂತೆ.

ಈ ಸಂಬಂಧ ಜೂನ್‌ 5 ರಂದು ಸ್ವಿಡ್ಜರ್‌‌ಲ್ಯಾಂಡಿನಾದ್ಯಂತ ಜನಾಭಿಪ್ರಾಯ ಸಂಗ್ರಹ ಮಾಡಲಿದೆ. ಈ ಪ್ರಸ್ತಾವನೆಗೆ ಇಲ್ಲಿನ ನಾಗರಿಕರು ಸಮ್ಮತಿ ಸೂಚಿಸಿದರೆ ಇಷ್ಟೊಂದು ಮೊತ್ತದ ಸಂಬಳ ನೀಡುವ ಜಗತ್ತಿನ ಮೊಟ್ಟ ಮೊದಲ ರಾಷ್ಟ್ರವಾಗಲಿದೆ ಸ್ವಿಡ್ಜರ್‌‌ಲ್ಯಾಂಡ್.

ಈ ಪ್ರಸ್ತಾವನೆ ಪ್ರಕಾರ ಬರಹಗಾರರು, ಬುದ್ದಿಜೀವಿಗಳು ಸೇರಿದಂತೆ ದೇಶದ ಪ್ರತಿ ವಯಸ್ಕನಿಗೆ 2,500 ಯುಎಸ್‌‌ ಡಾಲರ್‌ನಷ್ಟು ಪ್ರತಿ ತಿಂಗಳು ಸಂಬಳ ಸಿಗಲಿದೆ. ಇನ್ನು ಈ ಯೋಜನೆಯ ಲಾಭವನ್ನು ಮಕ್ಕಳು ಪಡೆಯಲಿದ್ದಾರೆ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದದ್ದೇ ಆದಲ್ಲಿ ಮಕ್ಕಳು ಪ್ರತಿ ತಿಂಗಳು 625 ಯುಎಸ್‌ ಡಾಲರ್‌ನಷ್ಟು ಹಣವನ್ನ ಸ್ಟೈಪಂಡ್‌‌ ರೂಪದಲ್ಲಿ ಪಡೆಯಲಿದ್ದಾರೆ.

ಈ ಯೋಜನೆ ಜಾರಿಗೆ ಸ್ವಿಸ್‌ ಸರ್ಕಾರಕ್ಕೆ ವರ್ಷಕ್ಕೆ 200 ಬಿಲಿಯನ್‌ ಯುಎಸ್‌ ಡಾಲರ್‌ ಹಣದ ಅಗತ್ಯವಿದೆ. ಆದ್ರೆ ಈ ಯೋಜನೆಗೆ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಯಾಕಂದ್ರೆ ಈ ಯೋಜನೆ ಜಾರಿಯಾಗಿ ತಿಂಗಳಿಗೆ ಇಂತಿಷ್ಟು ವೇತನ ಅಂತಾ ಸಿಕ್ಕರೆ ಜನರಲ್ಲಿ ಕೆಲಸದ ಆಸಕ್ತಿ ಕಡಿಮೆಯಾಗಿ ಸೋಮಾರಿಗಳಾಗೋ ಸಾಧ್ಯತೆ ಇದೆ ಅನ್ನೋದು ರಾಜಕೀಯ ಪಕ್ಷಗಳು ವಾದ.

  • ಶ್ರೀ

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

 

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...