ಟೀಂ ಇಂಡಿಯಾ ವಿರುದ್ಧ ವೀರೂ ಗರಂ

Date:

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20 ಪಂದ್ಯದ ನಿಮಿತ್ತ ಟೀಮ್‌ ಇಂಡಿಯಾ ನೀಡಿದ್ದ ಪಂದ್ಯ ಪೂರ್ವ ಹೇಳಿಕೆ ಹಾಗೂ ಪಂದ್ಯದಲ್ಲಿ ನಡೆದುಕೊಂಡ ರೀತಿಗೆ ಹೋಲಿಕೆ ಇಲ್ಲವೆಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿದ ಬಳಿಕ ವಿರೇಂದ್ರ ಸೆಹ್ವಾಗ್‌ ಈ ರೀತಿ ಹೇಳಿಕೆ ನೀಡಿದ್ದಾರೆ.

ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್‌ ಕೊಹ್ಲಿ, ಟಿ20 ಸರಣಿಯಲ್ಲಿ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಮೊದಲ ಆಯ್ಕೆಯ ಆರಂಭಿಕರು ಎಂದು ಹೇಳಿದ್ದರು. ಆದರೆ, ಪಂದ್ಯದಲ್ಲಿ ರೋಹಿತ್‌ ಶರ್ಮಾಗೆ ವಿಶ್ರಾಂತಿ ನೀಡಿ, ಧವನ್‌-ರಾಹುಲ್‌ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸೆಹ್ವಾಗ್‌ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಲು ಬಂದ ಭಾರತ ತಂಡ, ಬಹುಬೇಗ ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಬೆನ್ನಲ್ಲೆ ಶಿಖರ್‌ ಧವನ್‌ ಕೂಡ ಔಟ್‌ ಆಗಿದ್ದರು.

ಆನ್‌ ಪೀಲ್ಡ್ ಹಾಗೂ ಆಫ್‌ ಫೀಲ್ಡ್‌ ಬಗ್ಗೆ ಭಾರತ ತಂಡದ ನಡೆಯನ್ನು ತೋರಿಸಲು ವಿರೇಂದ್ರ ಸೆಹ್ವಾಗ್‌, ರಿಷಭ್‌ ಪಂತ್‌ ಅವರನ್ನು ಉದಾಹರಣೆಗೆ ತೆಗೆದುಕೊಂಡರು.

“ರಿಷಭ್‌ ಪಂತ್‌ ಅವರನ್ನು ಬೆಂಬಲಿಸುತ್ತೇವೆಂದು ಟೀಮ್‌ ಮ್ಯಾನೇಜ್‌ಮೆಂಟ್‌ ಹೇಳಿತ್ತು, ಆದರೆ, ಯುವ ವಿಕೆಟ್‌ ಕೀಪರ್‌ ಅವರನ್ನು ಓಡಿಐ ಹಾಗೂ ಟಿ20 ತಂಡಗಳಿಗೆ ಕೈ ಬಿಟ್ಟಿದ್ದರು. ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ ಗಳಿಸುತ್ತಿದ್ದಂತೆ, ಪಂತ್‌ ಫಿಟ್‌ ಇದ್ದು ಅವರನ್ನು ಟಿ20ಗೆ ಕರೆ ತರುತ್ತೇವೆ ಮತ್ತೊಂದು ಹೇಳಿಕೆ ನೀಡಿದ್ದರು. ಇದೀಗ ಎಡಗೈ ಆಟಗಾರ ಸ್ವಾತಂತ್ರವಾಗಿ ಆಡಲು ನಾವು ಅನುಮತಿ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಮುಂದಿನ ಎರಡು ಅಥವಾ ಮೂರು ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಪಂತ್ ಔಟಾದರೆ, ಅವರನ್ನು ಬೆಂಚ್‌ ಕಾಯುವುದನ್ನು ನಾವು ನೋಡುತ್ತೇವೆ. ಆದ್ದರಿಂದ ಅವರು(ಟೀಮ್‌ ಮ್ಯಾನೇಜ್‌ಮೆಂಟ್) ನೀಡುವ ಹೇಳಿಕೆ ಹೊಂದಿಕೆಯಾಗುವುದಿಲ್ಲ,” ಎಂದು ಸೆಹ್ವಾಗ್‌ ಹೇಳಿದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ 15.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 130 ರನ್‌ಗಳನ್ನು ಸಿಡಿಸಿ ಸುಲಭವಾಗಿ ಜಯ ತನ್ನ ತನ್ನದಾಗಿಸಿಕೊಂಡಿತು. ಜೇಸನ್‌ ರಾಯ್ (29), ಜೋಸ್‌ ಬಟ್ಲರ್‌ (28) ಮತ್ತು ಜಾನಿ ಬೈರ್‌ಸ್ಟೋವ್ (26*) ಬಿರುಸಿನ ಬ್ಯಾಟಿಂಗ್‌ ನಡೆಸಿ ಪ್ರವಾಸಿಗರ ಜಯದ ಹಾದಿಯನ್ನು ಸುಗಮಗೊಳಿಸಿದ್ದರು. ಭಾನುವಾರ ಸರಣಿಯ 2ನೇ ಪಂದ್ಯ ನಡೆಯಲಿದೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...