ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯ 2 ಪಂದ್ಯಗಳಿಂದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊರಗುಳಿದಿದ್ದರು. ಇದೀಗ ರೋಹಿತ್ ಶರ್ಮಾ ಯಾವ ಕಾರಣಕ್ಕೆ 2 ಪಂದ್ಯಗಳಿಂದ ಹೊರಗೆ ಉಳಿದಿದ್ದರು ಎಂಬ ಬಗ್ಗೆ ನೆಟ್ಟಿಗರು ಕಾರಣ ಕೊಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಮತ್ತು ಎರಡನೇ ಪಂದ್ಯದಿಂದ ರೋಹಿತ್ ಶರ್ಮಾ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳದೆ ವಿಶ್ರಾಂತಿಯಲ್ಲಿದ್ದರು. ಆದರೆ ನೆಟ್ಟಿಗಾರು ಮಾತ್ರ ರೋಹಿತ್ ಯಾಕೆ ಆಡುವ ಬಳಗಲ್ಲಿ ಕಾಣಿಸಿಕೊಂಡಿಲ್ಲ ಎಂಬ ಬಗೆಗೆ ಒಂದು ವೀಡಿಯೋ ತುಣುಕನ್ನು ಹಾಕಿ ಉತ್ತರ ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ರೋಹಿತ್ ಶರ್ಮಾ ತರಬೇತಿ ಸಿಬ್ಬಂದಿ ಹಿಂದೆ ಕುಳಿತುಕೊಂಡು ಕದ್ದು ತಿಂಡಿ ತಿನ್ನುತ್ತಿದ್ದರು. ಇದನ್ನು ಗಮನಿಸಿದ ಕ್ಯಾಮೆರಾ ಮ್ಯಾನ್ ಈ ದೃಶ್ಯವನ್ನು ಸೆರೆ ಹಿಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಹಿಟ್ ಮ್ಯಾನ್‍ಗೆ ಪಂದ್ಯಕ್ಕಿಂತ ವಡಾಪಾವ್ ಮುಖ್ಯ 2ನೇ ಪಂದ್ಯದಿಂದ ಹೊರಗುಳಿಯಲು ಇದೇ ಕಾರಣ ಎಂದು ಟ್ರೋಲ್ ಮಾಡಿದ್ದಾರೆ.
ವಡಾಪಾವ್ ತಿನ್ನುವ ಧಾವಂತದಲ್ಲಿದ್ದ ರೋಹಿತ್ ಕೆಳಗೆ ಬಗ್ಗಿಕೊಂಡು ತಿಂಡಿಯನ್ನು ಕಚ್ಚಿ ನಂತರ ಮೇಲೆ ನೋಡುತ್ತಿರುವ ದೃಶ್ಯವನ್ನು ನೋಡಿರುವ ನೆಟ್ಟಿಗರು ಹಲವು ಬಗೆ ಬಗೆಯ ಟ್ರೋಲ್‍ಗಳನ್ನು ಮಾಡುತ್ತಿದ್ದಾರೆ.
ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಮುಂದಿನ ಪಂದ್ಯಗಳಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು ಈಗಾಗಲೇ ತಂಡದೊಂದಿಗೆ ಅಭ್ಯಾಸದಲ್ಲಿ ತೋಡಗಿಕೊಂಡಿದ್ದಾರೆ.
ಇದೀಗ ಎಲ್ಲೆಡೆ ಹಿಟ್‍ಮ್ಯಾನ್ ತಿಂಡಿ ಕದ್ದುತಿನ್ನುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಇದು ಸೊಗಸಾದ ಆಹಾರ ಸಿಕ್ಕಂತಾಗಿದೆ.