ಈ ಬಾರಿಯ ಐಪಿಎಲ್ ಆರಂಭಗೊಳ್ಳುವ ಮುನ್ನವೇ ಹಲವಾರು ತಂಡಗಳು ತಮ್ಮ ತಂಡಗಳ ಜೆರ್ಸಿಯಲ್ಲಿ ಕೆಲ ಬದಲಾವಣೆಗಳನ್ನು ತರಲು ಮುಂದಾಗಿವೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯನ್ನು ಬದಲಾಯಿಸಿಕೊಂಡಿದ್ದು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ತಮ್ಮ ಜರ್ಸಿಯನ್ನು ಬದಲಾಯಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಈ ಕುರಿತು ಕೆಲವೊಂದಷ್ಟು ಜೆರ್ಸಿಯ ವಿನ್ಯಾಸಗಳು ಹರಿದಾಡುತ್ತಿವೆ. ಬೆಂಗಳೂರು ತಂಡ ಈ ಬಾರಿ ಈ ರೀತಿಯ ಜರ್ಸಿಯನ್ನು ತೊಟ್ಟು ಆಡಲಿದೆ ಎಂದು ಕೆಲವೊಂದಷ್ಟು ವಿನ್ಯಾಸ ಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಅಧಿಕೃತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ ಮೊದಲನೇ ವರ ತನ್ನ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಇದೆ.