ಶಿವರಾಜ್ ಕುಮಾರ್ ಸೇರಿ ಇನ್ನೂ ಹಲವು ಗಣ್ಯರಿಗೆ ಕೊಲೆ ಬೆದರಿಕೆ ಬಂದಿದೆ. ಶಿವರಾಜ್ ಕುಮಾರ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದಿದ್ದು ಸರ್ಕಾರ ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.
.ಶಿವರಾಜ್ ಕುಮಾರ್ , ಸಿ ಟಿ ರವಿ , ಪಬ್ಲಿಕ್ ಟಿವಿ ರಂಗನಾಥ್ ಮತ್ತು ಸಾಹಿತಿ ಬಿ ಟಿ ಲಲಿತಾ ನಾಯಕ್ ಅವರನ್ನು ಮೇ ಒಂದನೇ ತಾರೀಕಿನೊಳಗೆ ಕೊಲೆ ಮಾಡುವುದಾಗಿ ಅನಾಮಿಕ ವ್ಯಕ್ತಿ ಕಳುಹಿಸಿದ್ದ ಪತ್ರದಲ್ಲಿ ಬರೆಯಲಾಗಿದೆ.
ಪತ್ರ ಬರುತ್ತಿದ್ದಂತೆಯೇ ಸಾಹಿತಿ ಬಿ ಟಿ ಲಲಿತಾ ನಾಯಕ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಶಿವಣ್ಣ ಅವರು ಸಹ ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗನ್ ಮೆನ್ ಸೇರಿದಂತೆ 8 ಪೊಲೀಸರ ಭದ್ರತೆಯನ್ನು ಶಿವಣ್ಣ ಅವರ ಮನೆಗೆ ನೀಡಿದ್ದಾರೆ.