ನಟ ದರ್ಶನ್ ಅವರು ಆಗಾಗ ತಮ್ಮ ಅಭಿಮಾನಿಗಳ ಆಸೆಯಂತೆ ಅವರನ್ನು ಭೇಟಿ ಮಾಡಿ ಫೋಟೋ ನೀಡಿ ಅವರಿಗೆ ಖುಷಿ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಅಜ್ಜಿಯೊಬ್ಬರು ದರ್ಶನ್ ಅವರನ್ನ ನೋಡಲೇ ಬೇಕು ಎಂದು ಹಠ ಹಿಡಿದಿದ್ದ ಸ್ವತಃ ದರ್ಶನ್ ಅವರೇ ಆ ಅಜ್ಜಿಯನ್ನು ಕರೆಸಿಕೊಂಡು ಭೇಟಿ ಮಾಡಿದ್ದರು. ಇದೀಗ ಮತ್ತೊಂದು ಅಂತಹದ್ದೇ ಜನರ ಮನಸ್ಸು ಗೆಲ್ಲುವಂತಹ ಕೆಲಸವನ್ನು ದರ್ಶನ್ ಮಾಡಿದ್ದಾರೆ.
ಹೌದು ನಟ ದರ್ಶನ್ ತಮ್ಮ ಶಾಲಾ ದಿನಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಆಗಿದ್ದ ವ್ಯಕ್ತಿಯನ್ನು ಭೇಟಿ ಮಾಡಿ ಅವರ ಎಂಬತ್ತನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ. ಹೌದು ದರ್ಶನ್ ಅವರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ತೆರಳುತ್ತಿದ್ದರು ಆ ಬಸ್ ಡ್ರೈವರ್ ಆಗಿದ್ದ ವ್ಯಕ್ತಿಯನ್ನು ಇನ್ನೂ ನೆನಪಿನಲ್ಲಿ ಇಟ್ಟುಕೊಂಡು ಅವರ ಮನೆಗೆ ಸ್ವತಃ ದರ್ಶನ್ ಅವರೇ ಹೋಗಿ ಭೇಟಿ ನೀಡಿ ಅವರಿಗೆ ಎಂಬತ್ತನೇ ವರ್ಷದ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಇನ್ನು ಈ ವಿಷಯವನ್ನು ಸ್ವತಃ ದರ್ಶನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾರಥಿ ಮೀಟ್ ಸರ್ರಿಯಲ್ ಸಾರಥಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ದರ್ಶನ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.