ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎಲ್ಲಾ ಸರಣಿಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಕೊನೆಯದಾಗಿ ನಡೆದ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಟೀಮ್ ಇಂಡಿಯಾ ನೂತನ ದಾಖಲೆಯೊಂದನ್ನು ಬರೆದಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಎಲ್ಲಾ 3ಏಕದಿನ ಪಂದ್ಯಗಳ ಲ್ಲಿಯೂ ಟೀಮ್ ಇಂಡಿಯಾ 300+ ರನ್ ಕಲೆಹಾಕಿದೆ. ಇದೇ ರೀತಿ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ 3ಏಕದಿನ ಪಂದ್ಯಗಳ ಲ್ಲಿಯೂ ಸಹ ಟೀಮ್ ಇಂಡಿಯಾ 300+ ರನ್ ಗಳನ್ನು ಬಾರಿಸಿತ್ತು. ಈ ಮೂಲಕ ಟೀಮ್ ಇಂಡಿಯಾ ಸತತ 6ಪಂದ್ಯಗಳಲ್ಲಿ 300+ ರನ್ನುಗಳನ್ನು ಬಾರಿಸಿ ಇದೇ ಮೊದಲ ಬಾರಿಗೆ ಸತತ 6ಪಂದ್ಯಗಳಲ್ಲಿ 300+ ರನ್ ಬಾರಿಸಿದ ಸಾಧನೆ ಮಾಡಿದೆ.






