ಮುಂಬೈ: ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಅಂತೆಯೇ ಇದೀಗ ನಟಿ ತನ್ನ ಪತಿ ಮಾಡಿರುವ ಮಾನವೀಯ ಕೆಲಸದ ಕುರಿತು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಹೌದು. ಸನ್ನಿ ಪತಿ ಡೇನಿಯಲ್ ವೆಬರ್ ಅವರು ಒಂಟಿ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಚಾರವನ್ನು ಸ್ವತಃ ಸನ್ನಿ ಲಿಯೋನ್ ಅವರು ವೀಡಿಯೋ ಮೂಲಕ ಪತಿಯ ಘನ ಕಾರ್ಯವನ್ನು ಬರೆದುಕೊಂಡು ಹೆಮ್ಮೆ ವ್ಯಕ್ತಡಿಸಿದ್ದಾರೆ.

ಮೊದಲು ಪತಿಯ ಜೊತೆಗೆ ಡೇಟಿಂಗ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಸನ್ನಿ, ನಂತರ ಮಹಿಳೆಗೆ ಸಹಾಯ ಮಾಡಿರುವ ವೀಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಪತಿ ಡೇನಿಯಲ್ ಜೊತೆ ಕ್ಯೂಟ್ ಡೇಟ್. ಇವರು ರಾತ್ರಿ ಒಂಟಿ ಮಹಿಳೆಗೆ ಟಯರ್ ಚೇಂಜ್ ಮಾಡೋಕೆ ಸಹಾಯ ಮಾಡಿದರು. ಇವರು ನಿಜವಾದ ಜಂಟಲ್‍ಮ್ಯಾನ್ ಎಂದು ಬರೆದುಕೊಂಡಿದ್ದಾರೆ.






