ಗೋಧ್ರಾ ಹಿಂಸಾಚಾರದ ಬಳಿಕ ನಡೆದ ಗುಜರಾತ್‍ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಆರೋಪಿಗಳು ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2002ರಲ್ಲಿ ಗುಜರಾತ್‍ನ ಗೋಧ್ರಾ ಹತ್ಯಕಾಂಡದ ನಡೆದ ಬಳಿಕ ಗುಲ್ಬರ್ಗ್ ಸೊಸೈಟಿ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ರು. ಆ ವೇಳೆ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿ 69 ಮಂದಿ ಸಾವನ್ನಪ್ಪಿದ್ರು. ಈ ಪ್ರಕರಣದ ವಿಚಾರಣೆ ಗುಜರಾತ್‍ನ ವಿಶೇಷ ನ್ಯಾಯಾಲಯದಲ್ಲಿ 14 ವರ್ಷಗಳಿಂದ ನಡೆಯುತ್ತಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ 24 ಮಂದಿ ಆರೋಪಿಗಳನ್ನ ಕೊಲೆ ಆರೋಪಿಗಳು ಎಂದು ತೀರ್ಪು ನೀಡಿದೆ. ಅವರಲ್ಲಿ ಒಂಬತ್ತು ಮಂದಿ ಹದಿನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇನ್ನು ಎಸ್‍ಐಟಿ ಅಧಿಕಾರಿಗಳು 66 ಮಂದಿಯ ಮೇಲೆ ಆರೋಪ ಮಾಡಿತ್ತು. ಸಾಕ್ಷಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಕಾರ್ಪೋರೇಟರ್ ಬಿಪಿನ್ ಪಟೇಲ್, ವಿಎಚ್‍ಪಿ ನಾಯಕ ಅತುಲ್ ವೈದ್ಯ ಸೇರಿದಂತೆ 36 ಮಂದಿಯನ್ನ ಪ್ರಕರಣದಿಂದ ಖುಲಾಸೆಗೊಳಿಸಿದೆ. ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಜೂನ್ 6 ರಂದು ಹೊರ ಬೀಳಲಿದೆ. ಆದ್ರೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಖುಲಾಸೆಯಾಗಿರೋದಕ್ಕೆ ಕಾಂಗ್ರೆಸ್ ಸಂಸದ ಎಜ್ಸಾನ್ ಜಾಫ್ರಿ ಪತ್ನಿ, `ಇನ್ನು ನ್ಯಾಯ ಸಿಕ್ಕಿಲ್ಲ, ನಾನು ಕಾನೂನು ಹೋರಾಟ ಮುಂದುವೆರೆಸುತ್ತೇನೆ’ ಎಂದಿದ್ದಾರೆ.
- ರಘು ಆರ್ ಇಂಜನಹಳ್ಳಿ
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?