ಯುವರತ್ನ ಸಕ್ಸಸ್ : ಎಲ್ಲೆಡೆ ಮತ್ತಷ್ಟು ಪ್ರದರ್ಶನಗಳು ಸೇರ್ಪಡೆ

Date:

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ರಂದು ಭರ್ಜರಿಯಾಗಿ ಬಿಡುಗಡೆಯಾಗಿದ್ದು ಚಿತ್ರ ಊಹಿಸಿದ್ದಕ್ಕಿಂತ ದೊಡ್ಡಮಟ್ಟದಲ್ಲಿ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ. ಈ ಹಿಂದೆ ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಜೋಡಿ ನೀಡಿದ ರಾಜಕುಮಾರದಷ್ಟು ಈ ಚಿತ್ರ ಬರುವುದಿಲ್ಲ ಎಂದೇ ಹೇಳಲಾಗುತ್ತಿತ್ತು ಆದರೆ ಅದಕ್ಕೆಲ್ಲ ಸಂತೋಷ್ ಆನಂದ್ ರಾಮ್ ತಮ್ಮ ಸಿನಿಮಾದ ಮೂಲಕ ಉತ್ತರವನ್ನು ನೀಡಿದ್ದಾರೆ.

 

 

ಎಷ್ಟೋ ಸಿನಿಪ್ರೇಕ್ಷಕರು ಕಂಟೆಂಟ್ ವಿಚಾರಕ್ಕೆ ಬಂದರೆ ರಾಜಕುಮಾರ ಚಿತ್ರಕ್ಕೆ ಯುವರತ್ನ ಚಿತ್ರದ ಒಂದು ಕೈ ಮೇಲು ಎಂದು ಹೇಳುತ್ತಿದ್ದಾರೆ. ಈ ಮಾತು ಅಕ್ಷರಶಃ ಸತ್ಯ ಏಕೆಂದರೆ ಬೆಳಿಗ್ಗೆ ಚಿತ್ರ ಬಿಡುಗಡೆಯಾಗಿ ಮಧ್ಯಾಹ್ನದ ವೇಳೆಗೆ ಹಿಟ್ ಟಾಕ್ ಬರುತ್ತಿದ್ದಂತೆ ಸಂಜೆ ಮತ್ತು ರಾತ್ರಿ ಪ್ರದರ್ಶನವನ್ನು ಹೆಚ್ಚು ಮಾಡಲಾಗಿದೆ. ಹೌದು ಯುವರತ್ನ ಚಿತ್ರಕ್ಕೆ ರಾತ್ರಿ ಮತ್ತಷ್ಟು ಪ್ರದರ್ಶನಗಳನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಆಯೋಜಿಸಲಾಗಿದೆ.

 

 

ಸಿನಿಮಾವೊಂದರ ಕಂಟೆಂಟ್ ಚೆನ್ನಾಗಿದ್ದರೆ ಯಾರಿಂದಲೂ ನಿಲ್ಲಿಸಲಾಗುವುದಿಲ್ಲ ಚಿತ್ರ ಯಶಸ್ಸು ಗಳಿಸಿ ಹೇಗಿರುತ್ತದೆ ಎನ್ನುವುದಕ್ಕೆ ಯುವರತ್ನ ಉತ್ತಮ ಉದಾಹರಣೆ. ಬಿಡುಗಡೆಯಾಗಿ ಹತ್ತು ಗಂಟೆಗಳ ಒಳಗೆ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡು ಹೆಚ್ಚು ಶೋಗಳನ್ನು ಪಡೆದುಕೊಳ್ಳುತ್ತಿರುವ ಯುವರತ್ನ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಮತ್ತೊಂದು ದೊಡ್ಡ ಇಂಡಸ್ಟ್ರಿ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ..

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...