ಯುವರತ್ನ ಬಗ್ಗೆ ಡಿ ಫ್ಯಾನ್ಸ್ ಅಪಪ್ರಚಾರ!

Date:

ಚಂದನವನದಲ್ಲಿ ಫ್ಯಾನ್ ವಾರ್ ಇದ್ದೇ ಇದೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಬಗ್ಗೆ ಕೆಟ್ಟದಾಗಿ ಬಯ್ಯೋದು, ಸಿನಿಮಾ ಫ್ಲಾಪ್ ಅನ್ನೋದು , ಇಲ್ಲದೇ ಇರೋ ವಿಷಯಗಳನ್ನು ಇದೆ ಅಂತ ಕಾಮೆಂಟ್ ಹಾಕೋದೇ ಆ ಕೆಲ ಫ್ಯಾನ್ ವಾರ್ ಕಿಡಿಗೇಡಿಗಳ ಕೆಲಸ.

 

ಇದೀಗ ಈ ಫ್ಯಾನ್ ವಾರ್ ಮಿತಿಮೀರಿದ್ದು ಚೆನ್ನಾಗಿರೋ ಚಿತ್ರದ ಯಶಸ್ಸನ್ನು ಸಹಿಸದ ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಅಪಪ್ರಚಾರಕ್ಕೆ ಒಳಗಾಗುತ್ತಿರುವ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ.. ಇತ್ತೀಚೆಗೆ ಬರುತ್ತಿರುವ ಅದೇ ಹಳೆ ಕಥೆಯುಳ್ಳ ಹೊಸತನವಿಲ್ಲದ ಚಿತ್ರಕತೆಯುಳ್ಳ ಸಿನಿಮಾಗಳಿಗಿಂತ ಯುವರತ್ನ ಭಿನ್ನವಾಗಿ ನಿಲ್ಲುತ್ತದೆ.

 

ಸಿನಿಮಾ ಎಂದರೆ ಅದರಲ್ಲಿ ಕಡ್ಡಾಯವಾಗಿ ಸಂದೇಶವನ್ನು ನೀಡುವಂತಹ ಅಂಶಗಳಿರಬೇಕು ಅದನ್ನು ನೋಡಿ ಜನ ಬದಲಾಗಬೇಕು ಎಂಬ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಮಾಡಿರುವ ಚಿತ್ರವೇ ಯುವರತ್ನ. ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೇಳಬೇಕಾಗಿರುವ 1ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು ತಯಾರಾಗಿರುವ ಯುವರತ್ನ ಚಿತ್ರದ ಕುರಿತು ಅಪಪ್ರಚಾರವಾಗುತ್ತಿದೆ ಎಂದರೆ ನೀವು ನಂಬಲೇಬೇಕು.

 

 

 

ಎಲ್ಲೆಡೆ ತುಂಬು ಚಿತ್ರಮಂದಿರಗಳ ಪ್ರದರ್ಶನ ಕಾಣುತ್ತಿರುವ ಯುವರತ್ನ ಚಿತ್ರದ ಬಗ್ಗೆ ಕೆಲವರು ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರ ಬಿಡುಗಡೆಯಾದಾಗ ಪುನೀತ್ ಅಭಿಮಾನಿಗಳು ನಮ್ಮ ಚಿತ್ರದ ವಿರುದ್ಧ ಅಪಪ್ರಚಾರ ಮಾಡಿದ್ದರು ಹೀಗಾಗಿ ನಾವು ಇದೀಗ ಯುವರತ್ನ ಚಿತ್ರವನ್ನು ಡಿಪ್ರಮೋಟ್ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

 

 

ದರ್ಶನ್ ಅಭಿಮಾನಿಗಳ ಒಂದು ಅಧಿಕೃತ ಟ್ವಿಟರ್ ಖಾತೆಯಲ್ಲಿಯೇ ಯುವರತ್ನ ಚಿತ್ರದ ಕುರಿತು ಅಪಪ್ರಚಾರ ನಡೆಯುತ್ತಿದ್ದು ದರ್ಶನ್ ಅವರ ಹೆಸರನ್ನು ಹಾಳು ಮಾಡುವ ಕೆಲಸವನ್ನು ಅವರ ಅಭಿಮಾನಿಗಳೇ ಮಾಡಿದಂತಿದೆ. ಏನೇ ಆಗಲಿ ಒಂದೊಳ್ಳೆ ಕಂಟೆಂಟ್ ಇರುವ ಚಿತ್ರವನ್ನು ಯಾರು ಎಷ್ಟೇ ಕೂಗಾಡಿದರೂ ತಡೆಯಲು ಸಾಧ್ಯವಿಲ್ಲ ಎಂಬಂತೆ ಯುವರತ್ನ ಚಿತ್ರದ ಬುಕ್ಕಿಂಗ್ ಭರ್ಜರಿಯಾಗಿಯೇ ಸಾಗುತ್ತಿದೆ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...