ಬಿಸಿಸಿಐ ಅಂದ್ರೆ ಕ್ರಿಕೆಟ್‍ನ ದೊಡ್ಡಣ್ಣ ಅಂತ ಹೇಳ್ತಾರೆ.. ಯಾಕಂದ್ರೆ ಐಸಿಸಿಯನ್ನ ಸಹ ತನ್ನ ಹತೋಟಿಗೆ ತೆಗೆದುಕೊಳ್ಳುವ ತಾಕತ್ತು ಬಿಸಿಸಿಐಗಿದೆ.. ಹೆಸರಿಗೆ ಹೇಗೆ ದೊಡ್ಡಣ್ಣನೋ ಹಾಗೆ ಹಣ ಗಳಿಸೋದ್ರ್ರಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ನಮ್ಮ ಬಿಸಿಸಿಐ
(ಬೋರ್ಡ್ ಆಫ್ ಕಾಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ).. ಇನ್ನೂ ಬಿಸಿಸಿಐ ನಮ್ಮ ದೇಶಕ್ಕಾಗಿ ಆಡೋ ಕ್ರಿಕೆಟ್ ಪಟುಗಳ ಸಂಬಳದ ವಿಷ್ಯದಲ್ಲೂ ಧಾರಾಳ ತನವನ್ನ ಮೆರೆದಿದೆ.. ಯಾಕಂದ್ರೆ ನಮ್ಮ ಪ್ಲೇಯರ್‍ಗೆ ಗ್ರೇಡ್‍ನ ಪ್ರಕಾರ 1ಕೋಟಿ 50ಲಕ್ಷ 25 ಲಕ್ಷ ಸಂಬಳವನ್ನ ನೀಡುತ್ತೆ..
ಇನ್ನೂ ವಾರ್ಷಿಕವಾಗಿ ನಡೆಯೋ ಮಹಾಸಭೆಯಲ್ಲಿ ಕ್ರೇಂದ್ರಿಯ ಒಪ್ಪಂದಗಳನ್ನ ಅಪ್ರೂವ್ ಮಾಡಲಾಗುತ್ತೆ.. ಇದರಲ್ಲಿ ಯಾವ ಕ್ಯಾಟಗರಿಗೆ ಎಷ್ಟು ಸಂಭಾವನೆಯನ್ನ ನೀಡಬೇಕು ಅನ್ನೋದನ್ನ ತೀರ್ಮಾನಿಸಲಾಗುತ್ತ್ತೆ.. ಇದರಲ್ಲಿ ಬರುವುದೆ `ಎ’ `ಬಿ’ ಹಾಗೆ `ಸಿ’ ಗ್ರೇಡ್‍ಗಳು..
ರಾಷ್ಟ್ರೀಯ ಒಪ್ಪಂದವನ್ನು ಹೊಂದದೆ ಇರುವ ಯಾವುದೇ ಆಟಗಾರ ರಾಷ್ಟ್ರವನ್ನು ಪ್ರತಿನಿಧಿಸಿದರೆ ಅಂದ್ರೆ ಟೆಸ್ಟ್-ಏಕದಿನ-ಟಿ ಟ್ವೆಂಟಿಯ ಯಾವುದಾರು ಪಂದ್ಯದಲ್ಲಿ 3 ಮ್ಯಾಚ್‍ಗಳನ್ನ ಆಡಿದರೆ ಆತನನ್ನ ಬಿ ಅಥವಾ ಸಿ ಗ್ರೇಡ್‍ಗೆ ಸೇರಿಸಲಾಗುತ್ತೆ.. ಇನ್ನೂ 11ರಲ್ಲಿ ಸ್ಥಾನದ ಪಡೆದ ಆಟಗಾರರಿಗೆ ಹೆಚ್ಚುವರಿ ಪಂದ್ಯದ ಹಣವನ್ನ ಸಹ ನೀಡಲಾಗುತ್ತೆ.. ಇಷ್ಟೆ ಅಲ್ಲದೆ ಐಪಿಯಲ್ ಪಂದ್ಯಗಳಿಂದ ಕೂಡ ಹಣ ಇವರಿಗೆ ಹರಿದು ಬರುತ್ತೆ.. ಹಾಗಿದ್ರೆ ನಮ್ಮ ಕ್ರಿಕೆಟಿಗರಿಗೆ ವರ್ಷಕ್ಕೆ ಬಿಸಿಸಿಐ ನೀಡೊ ಸಂಭಾವನೆಯ ವಿವರ ಇಲ್ಲಿದೆ ನೋಡಿ..
ಎಂ.ಎಸ್.ಧೋನಿ – 1 ಕೋಟಿ..
ಭಾರತೀಯ ಕ್ರಿಕೆಟ್‍ನಲ್ಲಿ ದೊಡ್ಡಮಟ್ಟಿಗೆ ಹೆಸರುಗಳಿಸಿದ ನಾಯಕ ಎಂ.ಎಸ್.ಧೋನಿ.. `ಎ’ ಕ್ಯಾಟಗರಿಯಲ್ಲಿರೋ ಈ ಆಟಗಾರ ವರ್ಷಕ್ಕೆ ಬಿಸಿಸಿಐನಿಂದ ಒಂದು ಕೋಟಿ ಸಂಭಾವನೆಯನ್ನ ಪಡೆದುಕೊಳ್ತಾರೆ.. ಅದಕ್ಕಿಂತ ಹೆಚ್ಚಾಗಿ ಆಡ್‍ಗಳ ಮೂಲಕ ಹಣದ ಹೊಳೆಯನ್ನ ಹರಿಸ್ತಾರೆ ಧೋನಿ..
ವಿರಾಟ್ ಕೊಹ್ಲಿ – 1 ಕೋಟಿ
ಭಾರತೀಯ ಟೆಸ್ಟ್ ತಂಡದ ನಾಯಕ ವಿರಾಟ್‍ಕೊಹ್ಲಿ ಕೂಡ `ಎ’ ಗ್ರೇಡ್ ಸ್ಥಾನದಲ್ಲಿರೋ ಆಟಗಾರ.. ಹೀಗಾಗೆ ಒಂದು ಕೋಟಿ ಸಂಭಾವನೆಯನ್ನ ಪಡೆದ್ರೆ, ಅದಕ್ಕಿಂತ ಹೆಚ್ಚು ಜಾಹಿರಾತು ಮೂಲಗಳಿಂದ ಬರುತ್ತೆ…. ಸದ್ಯಕ್ಕೆ ಧೋನಿಯನ್ನ ಬೀಟ್ ಮಾಡಿ ಜಾಹಿರಾತು ಲೋಕದಲ್ಲಿ ಈತ ಪಾರುಪತ್ಯವನ್ನ ಸಾಧಿಸಿದ್ದಾನೆ..
ರವಿಚಂದ್ರನ್ ಆಶ್ವಿನ್ – 1 ಕೋಟಿ
ಆಫ್ ಸ್ಪಿನ್ ಹಾಗೆ ಕ್ಯಾರಂ ಬಾಲ್‍ನ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಸಹ ಇದೇ ಸಾಲಿನಲ್ಲಿರೋ ಆಟಗಾರ.. 2015ರಲ್ಲಿ 8 ಮ್ಯಾಚ್‍ಗಳ ಟೆಸ್ಟ್‍ನಲ್ಲಿ 55 ವಿಕೆಟ್‍ಗಳನ್ನ ಉರುಳಿಸಿದ್ರು.. ಇದ್ರ ಜೊತೆಗೆ ಕೆಲವೊಂದು ಜಾಹಿರಾತು ಮೂಲಕ ಹಣವನ್ನ ಪಡಿತಾರೆ..
ಅಜಿಂಕ್ಯ ರಹಾನೆ – 1 ಕೋಟಿ
ಸದ್ಯಕ್ಕೆ ಟಾಪ್ ಏಕದಿನ ಹಾಗೆ ಟಿ-20ಯಲ್ಲಿ ಆರ್ಡರ್ ಬ್ಯಾಟ್ಸ್‍ಮನ್ ಆಗಿ ಟೆಸ್ಟ್ ಏಕದಿನ ಟಿ-ಟ್ವೆಂಟಿ ಪಂದ್ಯಗಳಲ್ಲಿ ತನ್ನದೇ ಛಾಪು ಮೂಡಿಸಿರೋ ಈ ಆಟಗಾರ ಸಹ `ಎ’ ಗ್ರೇಡ್ ಆಟಗಾರನಾಗಿದ್ದಾನೆ.. ಜೊತೆಗೆ ಈತನ ಬ್ರ್ಯಾಂಡ್ ವ್ಯಾಲ್ಯೂ 25ರಿಂದ30 ಲಕ್ಷವಿದೆ..
ಅಂಬಟಿ ರಾಯುಡು- 50 ಲಕ್ಷ
ನಿಧಾನವಾಗಿ ಇಂಡಿಯನ್ ಕ್ರಿಕೆಟ್ ಟೀಮ್‍ನಲ್ಲಿ ಸ್ಥಾನವನ್ನ ಕಾಯಂ ಮಾಡಿಕೊಳ್ತಿರೋ ಈ ಆಟಗಾರ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ಧಾರೆ.. ಸದ್ಯಕ್ಕೆ ಸಂಬಳವನ್ನ ಪಡೆಯೋದ್ರಲ್ಲಿ `ಬಿ’ ಕ್ಯಾಟಗರಿಯಲ್ಲಿರೋ ಅಂಬಟಿ 50 ಲಕ್ಷ ಹಣವನ್ನ ವರ್ಷಕ್ಕೆ ಪಡಿತಾರೆ..
ರೋಹಿತ್ ಶರ್ಮಾ – 50 ಲಕ್ಷ
ಭಾರತೀಯ ಕ್ರಿಕೆಟ್‍ನ ಟಾಪ್ ಆರ್ಡರ್ ಬ್ಯಾಟ್ಸಮನ್ ಸೀಮಿತ ಹಾಗೆ ಟಿ-ಟ್ವೆಂಟಿ ಫಾಮ್ರ್ಯಾಟ್‍ನಲ್ಲಿ ಹಿಟ್‍ಮ್ಯಾನ್ ಅಂತಾನೆ ಗುರುತಿಸಿಕೊಂಡಿರೊ ರೋಹಿತ್ ಸಹ 50 ಲಕ್ಷವನ್ನ ವರ್ಷಕ್ಕೆ ಬಿಸಿಸಿಐನಿಂದ ಪಡಿತಾರೆ.. ಸದ್ಯದಲ್ಲೇ ಈತ ಟಾಪ್ `ಎ’ ಶ್ರೇಣಿಗೆ ಬಡ್ತಿಯನ್ನ ಪಡೆದ್ರು ಅಚ್ಚರಿಯಿಲ್ಲ..
ಸುರೇಶ್ ರೈನಾ – 50 ಲಕ್ಷ
ಮಧ್ಯಮ ಕ್ರಮಾಂಕದ ಬೆನ್ನೆಲುಬು ಸುರೇಶ್ ರೈನಾ.. ಇತ್ತ ಬ್ಯಾಟಿಂಗ್ ಫಿಲ್ಡಿಂಗ್ ಬೌಲಿಂಗ್ ಎಲ್ಲದ್ರಲ್ಲು ನಿಸ್ಸೀಮನಾಗಿರೋ ಈ ಆಟಗಾರ ಸಹ ರೋಹಿತ್ ಶರ್ಮಾ ಜೊತೆಗೆ 50 ಲಕ್ಷವನ್ನ ಸಂಬಳವಾಗಿ ಪಡೆದುಕೊಳ್ತಾರೆ… ಇನ್ನೂ ಇದೇ ಕ್ಯಾಟಗರಿಯಲ್ಲಿ ಮತ್ತಷ್ಟು ಪ್ಲೇಯರ್‍ಗಳೆಂದ್ರೆ ಶಿಖರ್ ಧವನ್, ಚೇತೇಶ್ವರ್ ಪೂಜಾರ, ಮೊಹಮದ್ ಶಾಮಿ, ಮುರುಳಿ ವಿಜಯ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮಾ ಇವರೆಲ್ಲರು ಬಿಸಿಸಿಐನಿಂದ 50 ಲಕ್ಷ ಸಂಭಾವನೆಯನ್ನ ವರ್ಷಕ್ಕೆ ಪಡಿತಾರೆ…
ಇನ್ನೂ ಸಿ ಕ್ಯಾಟಗರಿಯಲ್ಲಿ ಗುರುತಿಸಿಕೊಳ್ಳುವ ಪ್ಲೇಯರ್‍ಗಳು ಈಗಷ್ಟೇ ಇಂಡಿಯಾ ಟೀಮ್‍ಗೆ ಪಾದಾರ್ಪಣೆ ಮಾಡಿದ್ರೆ, ಮತ್ತೆ ಕೆಲ ಹಿರಿಯ ಆಟಗಾರರು ಸಹ ಇಲ್ಲಿದ್ಧಾರೆ.. ಇವರಲ್ಲಿ
ಹರ್ಭಜನ್ ಸಿಂಗ್- 25ಲಕ್ಷ
ಈ ಹಿಂದೆ ಭಾರತೀಯ ಕ್ರಿಕೆಟ್‍ನ ಸ್ಪಿನ್‍ನ ಟ್ರಂಪ್ ಕಾರ್ಡ್ ಆಗಿದ್ದ ಭಜ್ಜಿ ಈಗ ಲಯವನ್ನ ಕಂಡುಕೊಳ್ಳುವಲ್ಲಿ ಹೆಣಗಾಡುತ್ತಿದ್ದು `ಸಿ’ ಕ್ಯಾಟಗರಿಯಲ್ಲಿ ಸ್ಥಾನವನ್ನ ಪಡೆದಿದ್ಧಾರೆ.. ಇವರೊಂದಿಗೆ ಮತ್ತೊಬ್ಬ ಸೀನಿಯರ್ ಆದ ಅದ ಅಮಿತ್ ಮಿಶ್ರಾ ಸಹ ಇಲ್ಲಿದ್ದು, ಈ ಇಬ್ಬರು ತಲಾ 25 ಲಕ್ಷವನ್ನ ವರ್ಷಂಪ್ರತಿ ಪಡೆಯುತ್ತಾರೆ..
ಇನ್ನೂ ಯುವ ಪ್ರತಿಭೆಗಳಿಗೆ `ಸಿ’ ಕ್ಯಾಟಗರಿಯಲ್ಲಿ ಸ್ಥಾನ ಸಿಕ್ಕಿದ್ದು ಅಕ್ಸರ್ ಪಟೇಲ್, ವೃಧ್ದಿಮಾನ್ ಷಾ, ಬಿನ್ನಿ, ಮೋಹಿತ್ ಶರ್ಮಾ, ವರುಣ್ ಆರೂನ್, ಕರಣ್ ಶರ್ಮಾ, ರವೀಂದ್ರ ಜಡೇಜಾ, ಲೋಕೇಶ್ ರಾಹುಲ್, ಧವನ್ ಕುಲ್ಕರ್ಣಿ, ಶ್ರೀನಾಥ್ ಅರವಿಂದ್ ಈ ಲೀಸ್ಟ್‍ನಲ್ಲಿದ್ದಾರೆ..
ಆದ್ರೆ ಬಿಸಿಸಿಐ ಸಂಬಳವನ್ನ ಇಲ್ಲಿರೋರಲ್ಲಿ ಯಾರು ಹೆಚ್ಚಾಗಿ ನೆಚ್ಚಿಕೊಂಡಿಲ್ಲ.. ಕಾರಣ ಕೆಲವರಿಗೆ ಐಪಿಎಲ್‍ನಲ್ಲಿ ಹಣ ಬಂದ್ರೆ ಇನ್ನೂ ಕೆಲವರು ಜಾಹಿರಾತು ಲೋಕದಲ್ಲಿ ತಮ್ಮದೇ ಚಕ್ರಾಧಿಪತ್ಯವನ್ನ ಸಾಧಿಸಿದ್ಧಾರೆ.. ಇಲ್ಲಿ ಒಂದು ಕೋಟಿ ಬಂದ್ರೆ ಜಾಹಿರಾತುಗಳ ಮೂಲಕ ನೂರಾರು ಕೋಟಿಯನ್ನ ಗಳಿಸುವಲ್ಲಿ ನಮ್ಮ ಕ್ರಿಕೆಟ್ ಪಟುಗಳು ಹಿಂದೆ ಬಿದಿಲ್ಲ ಅನ್ನೋದನ್ನ ಇಲ್ಲಿ ಮರೆಯೋ ಹಾಗಿಲ್ಲ..
- ಅಶೋಕ್ ರಾಜ್
POPULAR STORIES :
ಫೈನಲ್ ಪಂದ್ಯದಲ್ಲಿ ಯುವಿ ಇರಬೇಕು ಕಣ್ರೀ..! ಗೆಲುವು ಗ್ಯಾರಂಟಿ..!!
ದಾದ್ರಿ ಹತ್ಯಾಕಾಂಡಕ್ಕೆ ರಾಜಕೀಯ ತಿರುವು..! ಯಾರನ್ನು ನಂಬೋದು ಹೇಳಿ..!?
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಇಪ್ಪತ್ನಾಲ್ಕು ಮಂದಿಯ ಆರೋಪ ಸಾಬೀತು..!
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?