ಮ್ಯಾಕ್ಸ್‌ವೆಲ್ ರಚಿಸಿರುವ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಆರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಡಿವಿಲಿಯರ್ಸ್ ಅವರಿಗೆ ಮೂರು ಮತ್ತು ಸುರೇಶ್ ರೈನಾರಿಗೆ ನಾಲ್ಕನೇ ಸ್ಥಾನವನ್ನು ಮ್ಯಾಕ್ಸ್‌ವೆಲ್ ತಮ್ಮ ಆಲ್ ಟೈಮ್ ತಂಡದಲ್ಲಿ ನೀಡಿದ್ದಾರೆ. ಐದನೇ ಸ್ಥಾನಕ್ಕೆ ಸ್ವತಃ ತಮ್ಮನ್ನೇ ಆರಿಸಿರುವ ಮ್ಯಾಕ್ಸ್‌ವೆಲ್ , ಆರನೇ ಆಟಗಾರನನ್ನಾಗಿ ಆ್ಯಂಡ್ರೆ ರಸೆಲ್ ಹಾಗೂ ಏಳನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಅವರನ್ನು ಹೆಸರಿಸಿದ್ದಾರೆ ಮತ್ತು ಧೋನಿ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನೂ ಸಹ ಕೊಟ್ಟಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಬಂದರೆ ಮ್ಯಾಕ್ಸ್‌ವೆಲ್ ಆರಿಸಿಕೊಂಡಿರುವ ಏಕೈಕ ಸ್ಪಿನ್ನರ್ ಹರ್ಭಜನ್ ಸಿಂಗ್. ಉಳಿದಂತೆ ಮೋಹಿತ್ ಶರ್ಮಾ , ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಮ್ಯಾಕ್ಸ್‌ವೆಲ್ ತಮ್ಮ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಘೋಷಿಸಿದ್ದಾರೆ.
ಮ್ಯಾಕ್ಸ್‌ವೆಲ್ ತಮ್ಮ ಈ ಆಲ್ ಟೈಮ್ ಐಪಿಎಲ್ ತಂಡದಲ್ಲಿ ದಿಗ್ಗಜ ಆಟಗಾರರಾದ ಲಸಿತ್ ಮಲಿಂಗಾ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಕ್ರಿಸ್ ಗೇಲ್ ಅವರ ಹೆಸರುಗಳನ್ನು ಪರಿಗಣಿಸದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.