ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆಯಲಿರುವ ಚುನಾವಣೆಗೆ ಕುದುರೆ ವ್ಯಾಪಾರ ನಡೆಯುತ್ತಿದೆ ಅನ್ನೋದು ಈಗ ಜಗತ್ ಜಾಹೀರವಾಗಿದೆ. ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಶಾಸಕರು ರಾಜ್ಯಸಭಾ ಅಭ್ಯರ್ಥಿಗೆ ಮತ ನೀಡಲು ಐದರಿಂದ 10 ಕೋಟಿ ರೂಪಾಯಿಯವರೆಗೆ ಬೇಡಿಕೆ ಇಟ್ಟಿರುವುದು ಬಯಲಾಗಿದೆ. ಕುಟುಕು ಕಾರ್ಯಾಚರಣೆಯಲ್ಲಿ ಜೆಡಿಎಸ್‍ನ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಜಿ.ಟಿ. ದೇವೇಗೌಡರ ಅಳಿಯ ರಾಮ್, ಕೆಜೆಪಿಯ ಆಳಂದ ಶಾಸಕ ಬಿ.ಆರ್. ಪಾಟೀಲ್, ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ, ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ತಮ್ಮ ಬೇಡಿಕೆಯನ್ನು ಪ್ರಸ್ತಾಪ ಮಾಡಿದ್ದಾರೆ. ರಾಜ್ಯಸಭೆಗೆ ಆಯ್ಕೆಗೆ ಎಲ್ಲ ಪಕ್ಷಗಳಲ್ಲು ಬಾರಿ ಒತ್ತಡವಿದ್ದು ನಾಲ್ಕರಿಂದ ಐದು ಮತಗಳ ಕೊರತೆಯಿದೆ. ಹೀಗಾಗಿ ಈ ಬಾರಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಹೀಗಾಗಿಯೇ ರಾಷ್ಟ್ರೀಯ ಸುದ್ದಿವಾಹಿನಿಗಳು ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಮಾಡಿ, ರಾಜ್ಯದ ಶಾಸಕರ ಮಾನ ಹರಾಜು ಹಾಕಿದ್ದಾರೆ. ಇನ್ನು, ಕುಟುಕು ಕಾರ್ಯಾಚರಣೆ ಬಯಲಾಗುತ್ತಿರುವಂತೆಯೇ ಅದರಲ್ಲಿ ಭಾಗಿಯಾಗಿರುವ ಶಾಸಕರು ತಾವು ಹಣದ ಬೇಡಿಕೆ ಮುಂದಿಟ್ಟಿರಲಿಲ್ಲ ಎಂಬ ಸಮಜಾಯಿಷಿ, ಸ್ಪಷ್ಟನೆ ನೀಡಿದ್ದಾರೆ. ಶಾಸಕರಾದ ಬಿ ಆರ್ ಪಾಟೀಲ್ ಧರಣಿಗೆ ನಿರ್ಧರಿಸಿದ್ದು, ಕುಟುಕು ಕಾರ್ಯಾಚರಣೆಯಿಂದ ಗೌರವಕ್ಕೆ ಧಕ್ಕೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
source : ಇಂಡಿಯಾ ಟುಡೆ
- ರಘು ಆರ್ ಇಂಜನಹಳ್ಳಿ
POPULAR STORIES :
ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!
ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!
ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..
ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!







