ದಿವ್ಯಾ ಕೊಟ್ಟ ರಿಂಗ್ ಕಳೆದಕೊಂಡು ಕಣ್ಣೀರಿಟ್ಟ ಅರವಿಂದ್!

Date:

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಬೈಕ್ ರೇಸರ್ ಅರವಿಂದ್ ಹಾಗೂ ನಟಿ ದಿವ್ಯಾ ಉರುಡುಗ ಮಧ್ಯೆ ಪ್ರೀತಿ ಮೊಳಕೆಯೊಡೆದಿದೆ ಅಂತಲೇ ಇತರೆ ಸ್ಪರ್ಧಿಗಳು ಭಾವಿಸಿದ್ದಾರೆ. ಅದಕ್ಕೆ ತಕ್ಕ ಹಾಗೆ, ಅರವಿಂದ್ ಕೈಗೆ ದಿವ್ಯಾ ಉರುಡುಗ ತಮ್ಮ ತಂದೆ ನೀಡಿದ್ದ ಉಂಗುರವನ್ನು ತೊಡಿಸಿದ್ದಾರೆ.

ದಿವ್ಯಾ ಉರುಡುಗ ಏನೋ ಖುಷಿಯಿಂದ ಹಾಗೂ ಪ್ರೀತಿಯಿಂದ ಅರವಿಂದ್‌ಗೆ ಉಂಗುರ ಕೊಟ್ಟರು. ಆದರೆ ಆ ಉಂಗುರವನ್ನು ಅರವಿಂದ್ ಎಲ್ಲೋ ಬೀಳಿಸಿಕೊಂಡಿದ್ದಾರೆ. ದಿವ್ಯಾ ಉರುಡುಗ ಕೊಟ್ಟಿದ್ದ ಉಂಗುರವನ್ನು ಅರವಿಂದ್ ಕಳೆದುಕೊಂಡ ಪ್ರಸಂಗ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಅರವಿಂದ್ ಉಂಗುರ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.

”ನನಗೆ ಸಣ್ಣ ಸಣ್ಣ ವಿಷಯಗಳು ತುಂಬಾ ಖುಷಿ ಕೊಡುತ್ತದೆ. ನಾನು ಯಾವಾಗಲೂ ನಿನ್ನ ಜೊತೆಗೆ ಇರ್ತೀನಿ ಅನ್ನೋ ಫೀಲಿಂಗ್ ಕೊಡುತ್ತಾರೆ” ಎಂದು ಅರವಿಂದ್ ಬಗ್ಗೆ ದಿವ್ಯಾ ಉರುಡುಗ ಒಂದ್ಕಡೆ ಕೂತು ಹೇಳುತ್ತಿರುತ್ತಾರೆ. ಇನ್ನೊಂದು ಕಡೆ ದಿವ್ಯಾ ಉರುಡುಗ ನೀಡಿದ್ದ ಉಂಗುರ ಕಳೆದುಹೋಗಿದ್ದು, ಅದನ್ನ ಅರವಿಂದ್ ಹುಡುಕಾಡುತ್ತಿರುತ್ತಾರೆ.

ಉಂಗುರ ಕಳೆದುಕೊಂಡ ಅರವಿಂದ್ ಕಣ್ಣೀರು ಹಾಕಿರುವುದು, ಉಂಗುರಕ್ಕಾಗಿ ‘ಬಿಗ್ ಬಾಸ್’ ಮನೆಯ ಮೂಲೆಮೂಲೆಯನ್ನೂ ಅರವಿಂದ್ ಜಾಲಾಡುವುದು, ಉಂಗುರ ಹುಡುಕುವಲ್ಲಿ ಅರವಿಂದ್‌ಗೆ ಮಂಜು ಪಾವಗಡ, ಶುಭಾ ಪೂಂಜಾ ಕೂಡ ಸಹಾಯ ಮಾಡಿರುವುದು ಪ್ರೋಮೋದಲ್ಲಿದೆ.

ಅರವಿಂದ್‌ ಉಂಗುರ ಕಳೆದುಕೊಂಡ ವಿಷಯ ದಿವ್ಯಾ ಉರುಡುಗಗೆ ಗೊತ್ತಿಲ್ಲ. ದಿವ್ಯಾ ಉರುಡುಗಗೆ ಗೊತ್ತಾಗುವಷ್ಟರಲ್ಲಿ ಅರವಿಂದ್‌ಗೆ ಉಂಗುರ ಸಿಗುತ್ತಾ? ಎಂಬ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಅರವಿಂದ್ ಉಂಗುರ ಕಳೆದುಕೊಂಡ ಪ್ರೋಮೋವನ್ನು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಹಂಚಿಕೊಂಡ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ”ಪ್ರೀತಿಯಿಂದ ದಿವ್ಯಾ ಒಂದು ಉಂಗುರ ಕೊಡ್ತಾಳೆ. ಅದನ್ನು ಅರವಿಂದ್ ಖುಷಿಯಿಂದ ಹಾಕ್ಕೋತಾರೆ. ಸ್ವಲ್ಪ ಹೊತ್ತಾದ ಮೇಲೆ ನೋಡಿದರೆ ಕೈಬೆರಳಲ್ಲಿರೋ ಉಂಗುರ ಕಾಣ್ತಾ ಇಲ್ಲ. ಅರವಿಂದ್ ಇಡೀ ಮನೆ ಹುಡುಕ್ತಾರೆ. ಸಿಕ್ಕಿದ್ದನ್ನೆಲ್ಲಾ ಜಾಲಾಡ್ತಾರೆ. ಇದು ಗೊತ್ತಾಗಿ ಮನೆಯವರೆಲ್ಲಾ ರಿಂಗ್ ಹುಡುಕುವುದಕ್ಕೆ ಅರವಿಂದ್‌ಗೆ ಸಹಾಯ ಮಾಡ್ತಾರೆ. ಅಲ್ಲೇ ಕೂತಿರೋ ದಿವ್ಯಾಗೆ ಏನಾಗ್ತಿದೆ ಅಂತ ಯಾರೂ ಹೇಳ್ತಿಲ್ಲ. ಹುಡುಕ್ತಾ ಇರೋವಷ್ಟೂ ಹೊತ್ತು ಅರವಿಂದ್ ಕಣ್ಣು ಒದ್ದೆಯಾಗಿದೆ. ಅವರಿಗೆ ಕಳೆದುಹೋಗಿರೋ ರಿಂಗ್ ಸಿಗುತ್ತಾ? ಕಳ್ಕೊಂಡಿದ್ದು ಬರೀ ಉಂಗುರಾನ ಅಥವಾ ಅದನ್ನ ಕಳ್ಗೊಂಡಿದ್ರಿಂದ ಸಿಕ್ಕಿರುವ ಇನ್ನೇನೋ ಅವರಿಗೆ ಗೊತ್ತಾಗೋದಕ್ಕಿದೆಯಾ?” ಎಂದು ಬರೆದುಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...