ನಿಧಿಗೆ ಮುತ್ತುಕೊಟ್ಟ ಅರವಿಂದ್!

Date:

ಈ ವಾರ ಒಂಟಿ ಮನೆ ಹಾಸ್ಟೆಲ್ ಆಗಿ ಬದಲಾಗಿದೆ. ಹುಡುಗಿಯರ ಹಾಸ್ಟೆಲ್‍ಗೆ ನಿಧಿ ಸುಬ್ಬಯ್ಯ ಮತ್ತು ಹುಡುಗರ ಹಾಸ್ಟೆಲ್‍ಗೆ ಪ್ರಶಾಂತ್ ಸಂಬರಗಿ ವಾರ್ಡನ್ ಆಗಿದ್ದಾರೆ. ಹುಡುಗರು ಪಕ್ಕದ ಹುಡುಗಿಯರನ್ನು ನೋಡಲು ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿದ್ರು. ಆದ್ರೆ ಲೇಡಿ ವಾರ್ಡನ್ ಯಾರನ್ನೂ ಒಳ ಬಿಡಲ್ಲ ಅಂತ ಹೇಳಿದ್ರು. ಈ ವೇಳೆ ಲೇಡಿ ವಾರ್ಡನ್‍ಗೆ ಪೂಸಿ ಹೊಡೆದ ಅರವಿಂದ್ ಕೈ ಹಿಡಿದು ಮುತ್ತು ಕೊಟ್ಟರು.

ಬಿಗ್‍ಬಾಸ್ ಮನೆ ಎರಡು ಹಾಸ್ಟೆಲ್ ಗಳಾಗಿ ಡಿವೈಡ್ ಆಗಿದೆ. ಹುಡುಗಿಯರು ನಿಧಿ ಸುಬ್ಬಯ್ಯ ಬಳಿ ಬಂದು ಹಾಸ್ಟೆಲ್‍ಗೆ ಪ್ರವೇಶ ಪಡೆದರು. ಅತ್ತ ಪಕ್ಕದಲ್ಲಿಯೇ ಹುಡುಗರ ಹಾಸ್ಟೆಲಿನ ಅಡ್ಮಿಶನ್ ನಡೆಯುತ್ತಿತ್ತು. ನಿಧಿ ಬಳಿ ಬಂದ ಅರವಿಂದ್, ಚಕ್ರವರ್ತಿ, ರಾಜೀವ್, ಶಮಂತ್ ಹಾಸ್ಟೆಲ್ ಒಳಗೆ ಬಿಡಿ ಅಂತ ಕೇಳ್ಕೊಂಡ್ರು. ಆದ್ರೆ ನಿಧಿ ನೋ ಬಿಡಲ್ಲ ಅಂದ್ರು.

ಅಲ್ಲಿಗೆ ಬಂದ ರಘು, ಏ ನೋಡ್ರೋ ವಾರ್ಡನ್ ಎಷ್ಟು ಸಖತ್ ಆಗಿದ್ದಾರೆ ಅಲ್ವಾ ಅಂತ ಹೇಳಿದ್ರು. ಚಕ್ರವರ್ತಿ ರಿಜಿಸ್ಟರ್ ಬುಕ್ ತೆಗೆದು ನಿನ್ನ ಹುಡುಗಿ ನಂಬರ್ ಬರೋಕೆ ಅಂದ್ರು. ಇಷ್ಟಕ್ಕೆ ಸುಮ್ಮನಾಗದ ಹುಡುಗರ ಗ್ಯಾಂಗ್, ಸಖತ್ ಆಗವಳೆ, ಸುಮ್ನೆ ನಗ್ತಾಳೆ ಅಂತ ಹಾಡು ಹೇಳಿ ಇಂಪ್ರೆಸ್ ಮಾಡೋಕೆ ಬಂದ್ರು. ಆದ್ರೆ ವಾರ್ಡನ್ ನಿಧಿ ಮಾತ್ರ ನಂಬರ್ ಕೊಡಲ್ಲ. ಹಾಸ್ಟೆಲ್ ಒಳಗೂ ಸಹ ಬಿಡಲ್ಲ ಅಂತ ಅಲ್ಲಿಂದ ಎದ್ದು ಹೋದ್ರು.

ಹಾಸ್ಟೆಲ್ ಆಟದಲ್ಲಿ ಪುರುಷ ಸ್ಪರ್ಧಿಗಳು ಪಕ್ಕಾ ತರಲೆಗಳಾಗಿದ್ದಾರೆ. ಈ ಹಾಸ್ಟೆಲ್ ಟಾಸ್ಕ್ ನಲ್ಲಿ ಬಿಗ್‍ಬಾಸ್ ಹೇಳಿದಂತೆ ಅರವಿಂದ್-ದಿವ್ಯಾ ಯು, ಮಂಜು-ದಿವ್ಯಾ ಸುರೇಶ್, ರಘು-ವೈಷ್ಣವಿ ಲವ್ ಬಡ್ರ್ಸ್ ಗಳಾಗಿದ್ದಾರೆ. ರೀಲ್ ಆಟ ಆಡುತ್ತಾ ಈ ಜೋಡಿಗಳು ರಿಯಲ್ ಆಗಿ ಒಬ್ಬರಿಗೊಬ್ಬರು ಹತ್ರ ಆಗ್ತಿರೋದು ಮಾತ್ರ ಸತ್ಯ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...