ಇದೇ ಕನ್ನಡ ಸಿನಿಮಾದ ಬಿಗ್ಗೆಸ್ಟ್ ಕಟ್ಔಟ್!

Date:

ಚಿತ್ರಮಂದಿರಗಳ ಮುಂದೆ ಕಟೌಟ್ ನಿಲ್ಲಿಸಿ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಕುಂಕುಮ ಅರಿಶಿನ ಚೆಲ್ಲಿ ತಮಟೆ ಏಟಿಗೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ನಂತರವೇ ಅಭಿಮಾನಿ ದೇವರುಗಳು ಚಿತ್ರಮಂದಿರದ ಒಳಗೆ ಬರುವುದು. ಹೀಗಾಗಿ ಚಿತ್ರಮಂದಿರಗಳ ಮುಂದೆ ಕಟೌಟ್ ನಿಲ್ಲಿಸುವುದು ಒಂದು ರೀತಿಯ ಕ್ರೇಜ್ ಆಗಿಬಿಟ್ಟಿದೆ. ಈ ಹಿಂದೆ ಪ್ರಮುಖ ನಗರಗಳ ಚಿತ್ರಮಂದಿರಗಳ ಮುಂದೆ ಕಟೌಟ್ ಗಳನ್ನು ನಿಲ್ಲಿಸಲಾಗುತ್ತಿತ್ತು ಆದರೆ ಇದೀಗ ಬಿ ಮತ್ತು ಸಿ ಸೆಂಟರ್ ಗಳಿಗೂ ಸಹ ಕಟೌಟ್ ಗಳನ್ನು ನಿಲ್ಲಿಸಲಾಗುತ್ತಿದೆ.

 

 

ಇದೀಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರವೊಂದರ ಹಳೆಯ ಕಟೌಟ್ ಚಿತ್ರ ವೈರಲ್ ಆಗಿದ್ದು ನೋಡುಗರು ಆ ಕಾಲಕ್ಕೆ ಈ ರೇಂಜಿನ ಕಟೌಟಾ ಎಂದು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಿದೆ. ಹೌದು ರವಿಚಂದ್ರನ್ ಅಭಿನಯದ ಯುದ್ಧಕಾಂಡ ಚಿತ್ರದ ಕಟೌಟ್ ಪೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಡೀ ಚಿತ್ರಮಂದಿರವೇ ಮುಚ್ಚುವಷ್ಟು ದೊಡ್ಡಮಟ್ಟದ ಕಟೌಟ್ ಅನ್ನು ಆ ಕಾಲಕ್ಕೆ ನಿಲ್ಲಿಸಲಾಗಿತ್ತು.

 

 

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕ್ರೇಜಿಸ್ಟಾರ್ ಎನ್ನುವ ಹೆಸರಿಗೆ ತಕ್ಕಂಥ ಕ್ರೇಜ್ ಎಂದು ಚಂದನವನದ ಪ್ರೇಕ್ಷಕ ವರ್ಗ ಮಾತನಾಡಿಕೊಳ್ಳುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...