ಅಪ್ರಾಪ್ತೆ ಅತ್ಯಾಚಾರ : ಟಿಕ್ ಟಾಕ್ ಸ್ಟಾರ್ ಅರೆಸ್ಟ್

Date:

ಓ ಮೈ ಗಾಡ್ ಡೈಲಾಗ್‌ ಮೂಲಕವೇ ಟಿಕ್‌ಟಾಕ್‌ನಲ್ಲಿ ಖ್ಯಾತಿ ಪಡೆದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಟಿಕ್‌ಟಾಕ್‌ ಸ್ಟಾರ್‌ ‘ಫನ್‌ ಬಕೆಟ್‌ ಭಾರ್ಗವ್‌’ ಎಂಬಾತನನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಆಂಧ್ರ ಪೊಲೀಸರು ಟಿಕ್‌ಟಾಕ್‌ ಸ್ಟಾರ್‌ ಚಿಪ್ಪಡಾ ಭಾರ್ಗವ್ ಅಲಿಯಾಸ್ ಫನ್‌ ಬಕೆಟ್‌ ಭಾರ್ಗವ್‌ನನ್ನು ವಿಶಾಖಪಟ್ಟಣಂನಲ್ಲಿ ಬಂಧಿಸಿದ್ದಾರೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಏಪ್ರಿಲ್ 16ರಂದು ವಿಶಾಖಪಟ್ಟಣಂ ನಗರದ ಪೆಂಡುರ್ತಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

ಆರೋಪಿ ಫನ್‌ ಬಕೆಟ್‌ ಭಾರ್ಗವ್‌ನನ್ನು ಹೈದರಾಬಾದ್‌ನ ಕೊಂಪಲ್ಲಿಯಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದು, ಈತ ಸಂತ್ರಸ್ತೆಯನ್ನು ಟಿಕ್‌ಟಾಕ್ ವೀಡಿಯೊಗಳಲ್ಲಿ ನೋಡಿ ಆಕೆಯ ಸಂಪರ್ಕ ಪಡೆದು ಬಳಿಕ ಟಿವಿ ಶೋಗಳಲ್ಲಿ ಆಫರ್‌ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಬಳಿಕ ಆಕೆಗೆ ಲವ್‌ ಪ್ರಪೋಸ್‌ ಮಾಡಿದ್ದು, ಆಕೆ ತಿರಸ್ಕರಿಸಿದಾಗ ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್‌ ಅಧಿಕಾರಿ, ‘ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿದ್ದು, ಪೋಕ್ಸೊ ಕಾಯ್ದೆಯನ್ನು ಹೊರತುಪಡಿಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಲೈಂಗಿಕ ದೌರ್ಜನ್ಯಕ್ಕಾಗಿ ಶಿಕ್ಷೆ), 354 (ಮಹಿಳೆಗೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಭಾರ್ಗವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮೇ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಫನ್‌ ಬಕೆಟ್‌ ಭಾರ್ಗವ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆತನ ಜೊತೆ ಟಿಕ್‌ಟಾಕ್‌ ವಿಡಿಯೋಗಳಲ್ಲಿ ಕಾಣಿಸುತ್ತಿದ್ದ ನಿತ್ಯಾ ಎಂಬ ಹುಡುಗಿಯ ಬಗ್ಗೆ ಇಲ್ಲಸಲ್ಲದ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದು, ಕೆಲವು ಮಾಧ್ಯಮಗಳು ಸಂತ್ರಸ್ತ ಬಾಲಕಿ ನಿತ್ಯಾ ಎಂಬಂತೆ ತೋರಿಸುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ನಿತ್ಯಾ ‘ನಾನು ಕಳೆದ 12 ತಿಂಗಳುಗಳಿಂದ ಭಾರ್ಗವ್ ಅವರೊಂದಿಗೆ ಸಂಪರ್ಕದಲ್ಲಿಲ್ಲ, ಸಾಮಾಜಿಕ ಮಾಧ್ಯಮಗಳ ಮೂಲಕವೇ ಭಾರ್ಗವ್ ಬಂಧನದ ವಿಚಾರ ತಿಳಿದುಬಂದಿದೆ. ಇನ್ನು ಕೆಲವು ಸಾಮಾಜಿಕ ಮಾಧ್ಯಮಗಳು ಭಾರ್ಗವ್‌ನಿಂದ ಅತ್ಯಾಚಾರಕ್ಕೊಳಗಾದಂತೆ ಬಿಂಬಿಸಲು ಬಳಸುತ್ತಿರುವ ತನ್ನ ಫೋಟೋಗಳನ್ನು ಕೂಡಲೇ ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...