ಮಾಧ್ಯಮದವರೊಡನೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಿಎಂ ಸೂಚನೆಯಂತೆ ಅಧಿಕಾರಿಗಳ ಸಭೆ ಮಾಡಿದ್ದೇನೆ, ಪೊಲೀಸ್ ಇಲಾಖೆ,ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಹಾಗು ಬಿಬಿಎಂಪಿಆಯುಕ್ತರು,ಜೋನಲ್ ಹೆಡ್ ಗಳು ನಮ್ಮಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿದ್ದೇನೆ ಬೆಂಗಳೂರಿನಲ್ಲಿ ಎಂಟುಝೋನ್ ಮಾಡಿದ್ದೇವೆ.
೩ ಸಾವಿರ ಬೆಡ್ ಲಭ್ಯವಾಗಿದ್ದವು ಇಲ್ಲಿಯವರೆಗೆ ೭೫೦೦ ಬೆಡ್ ಸಿಕ್ಕಿವೆ, ಇನ್ನು ೪ ಸಾವಿರ ಬೆಡ್ ನಮಗೆ ಅವಶ್ಯಕತೆಯಿದೆ ಬೆಡ್ ಪಡೆಯುವ ಸಲುವಾಗಿ ಜಂಟಿ ಕಮೀಷನರ್ ಗೆ ಜವಾಬ್ದಾರಿಇದೇ ನಮ್ಮ ಡಿಸಿಪಿಗಳಿಗೂ ಹೊಣೆ ನೀಡಿದ್ದೇವೆ, ಸ್ಥಳೀಯ ಆಸ್ಪತ್ರೆ ಬಗ್ಗೆ ಮಾಹಿತಿ ಪಡೆಯುವುದು
ಅಲ್ಲಿ ಬೆಡ್ ಪಡೆದುಕೊಳ್ಳುವುದಕ್ಕೆ ಸೂಚಿಸಿದ್ದೇವೆ ಕೆಲವು ಆಸ್ಪತ್ರೆಗಳಿಗೆ ಕಡೆ ಲಾ ಆಂಡ್ ಆರ್ಡರ್ ಸಮಸ್ಯೆಯಿದೆ ಅಲ್ಲಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕು ನಮಗೆ ಜನರಲ್ ಬೆಡ್ ಗಿಂತ ಆಕ್ಸಿಜನ್ ಬೆಡ್ ಮುಖ್ಯ ಇದೇ ಮೂರು ದಿನದಲ್ಲಿ ಬೆಡ್ ಪಡೆದುಕೊಳ್ಲುವಂತೆ ಸೂಚಿಸಿದ್ದೇನೆ.
ಅನಗತ್ಯ ಓಡಾಡುವವರಿಗೆ ಬ್ರೇಕ್ ಹಾಕಬೇಕು ಮಾತುಕೇಳದವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೇವೆ ನೈಟ್ ಕರ್ಪ್ಯೂ ಯಶಸ್ವಿಯಾಗಿತ್ತು ಅದೇ ರೀತಿ ವೀಕ್ ಎಂಡ್ ಕರ್ಪ್ಯೂ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಬೇಕು ನಮ್ಮ ಅಧಿಕಾರಿಗಳಿಗೆ ಈ ಬಗ್ಗೆ ಆದೇಶಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.