ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ತಂಡ ಯಾವುದು ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ. ಆರ್ ಸಿಬಿ ಹೊಂದಿರುವಷ್ಟು ಅಭಿಮಾನಿ ಬಳಗವನ್ನು ಐಪಿಎಲ್ ನ ಬೇರೆ ಯಾವುದೇ ತಂಡವೂ ಸಹ ಹೊಂದಿಲ್ಲ. ಐಪಿಎಲ್ ಹತ್ತಿರ ಬಂತೆಂದರೆ ಸಾಕು ಸಾಮಾಜಿಕ ಜಾಲತಾಣದ ತುಂಬ ಆರ್ ಸಿಬಿ ಅಭಿಮಾನಿಗಳದ್ದೇ ಕಾರುಬಾರು. ಚಿಕ್ಕಮಕ್ಕಳು, ಹುಡುಗಿಯರು ಸಹ ಆರ್ ಸಿ ಬಿ ಮೇಲಿನ ತಮ್ಮ ಅಭಿಮಾನವನ್ನು ತೋರಿಸುತ್ತಾರೆ.
ರಥೋತ್ಸವದ ವೇಳೆ ರಥಕ್ಕೆ ಹಣ್ಣು ಜವನ ದಲ್ಲಿ ಈ ಸಲ ಕಪ್ ನಮ್ದೇ ಎಂದು ಬರೆದು ಎಸೆಯುವುದರ ಮೂಲಕ ಕೆಲವರು ಅಭಿಮಾನವನ್ನು ತೋರಿಸುತ್ತಾರೆ, ಇನ್ನೂ ಕೆಲವರು ಹಲವಾರು ನೋಟನ್ನು ಒಟ್ಟುಗೂಡಿಸಿ ಅದರಲ್ಲಿರುವ ಕ್ರಮಸಂಖ್ಯೆಯಲ್ಲಿ ಈ ಸಲ ಕಪ್ ನಮ್ದೆ ಎಂಬ ಬರಹ ಬರುವಂತೆ ಕ್ರಿಯೇಟಿವಿಟಿಯನ್ನು ತೋರಿಸುತ್ತಾರೆ. ಇತ್ತೀಚೆಗಷ್ಟೇ ಕೆಲ ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ಸತತ ಮೂರನೇ ಪಂದ್ಯ ಗೆದ್ದ ಬಳಿಕ 5ಸಾವಿರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೆಲ ತಂಡಗಳು ಕಪ್ ಗೆದ್ದ ನಂತರವೂ ಸಹ ಈ ಮಟ್ಟಿಗಿನ ಅಭಿಮಾನ ಹಾಗೂ ಕ್ರೇಜ್ ಇರುವುದಿಲ್ಲ. ಇದೀಗ ಅಂತಹದ್ದೇ ಮತ್ತೊಂದು ಅಭಿಮಾನದ ಉದಾಹರಣೆ ಇಲ್ಲಿದೆ. ಮದುವೆಯೊಂದರ ಆರತಕ್ಷತೆ ಸಂಭ್ರಮದಲ್ಲಿ ವೇದಿಕೆಯ ಮೇಲೆ ಆರ್ ಸಿಬಿ ಬಾವುಟವನ್ನು ಹಾರಿಸುವುದರ ಮೂಲಕ ಸಂಭ್ರಮಾಚರಣೆ ಮಾಡಲಾಗಿದೆ. ಯುವಕ ಯುವತಿಯರ ದೊಡ್ಡ ಗುಂಪೊಂದು ವಧು ಮತ್ತು ವರರ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಾವುಟವನ್ನು ಹಿಡಿದು ಫೋಸ್ ಕೊಟ್ಟಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.