ಮೊಹಮ್ಮದ್ ಸಿರಾಜ್.. ಈ ಪ್ರತಿಭೆ ಮೊದಲ ಬಾರಿ ಆರ್ ಸಿಬಿ ಪರ ಆಡಿದಾಗ ಸಾಲು ಸಾಲು ಟೀಕೆ ಮತ್ತು ಟ್ರೋಲ್ ಗಳನ್ನು ಎದುರಿಸಿದರು. ಸತತ ಕಳಪೆ ಪ್ರದರ್ಶನ ನೀಡುತ್ತಿದ್ದ ಸಿರಾಜ್ ಅವರನ್ನು ರನ್ ಮೆಷಿನ್ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದ ನಂತರ ಮೊಹಮ್ಮದ್ ಸಿರಾಜ್ ಬೌಲಿಂಗ್ ವೈಖರಿಯೇ ಬದಲಾಗಿಬಿಟ್ಟಿದೆ. ಯಾವ ಮಟ್ಟಕ್ಕೆ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಅಭಿವ್ಯಕ್ತಿಗೊಂಡಿದೆ ಎಂದರೆ ಪಂದ್ಯವನ್ನು ಬದಲಾಯಿಸುವಷ್ಟು. ಮೊಹಮ್ಮದ್ ಸಿರಾಜ್ ಅವರ ಈ ಅದ್ಬುತ ಬೌಲಿಂಗ್ ವೈಖರಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿಯೂ ಮುಂದುವರೆದಿದೆ.
ಇದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಗೇಮ್ ಚೇಂಜಿಂಗ್ ವಿಕೆಟ್ ಗಳನ್ನು ಪಡೆದಿದ್ದಾರೆ. ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ಈ ಮೂವರು ಡೇಂಜರಸ್ ಆಟಗಾರರ ವಿಕೆಟ್ ಗಳನ್ನು ಪಡೆಯುವುದರ ಮೂಲಕ ಸಿರಾಜ್ ಮಿಂಚಿದ್ದಾರೆ. ಅದರಲ್ಲಿಯೂ ಜೋಸ್ ಬಟ್ಲರ್ ಹಾಗೂ ಮಿಲ್ಲರ್ ಅವರ ವಿಕೆಟ್ ಗಳನ್ನು ಬಹುಬೇಗ ತೆಗೆಯುವುದರ ಮೂಲಕ ರಾಜಸ್ಥಾನ್ ಬೃಹತ್ ಮೊತ್ತವನ್ನು ಕಲೆಹಾಕುವುದನ್ನು ಸಿರಾಜ್ ತಪ್ಪಿಸಿದ್ದಾರೆ.
ಸಾಲು ಸಾಲು ಟ್ರೋಲ್ ಗಳಿಗೆ ಒಳಗಾಗುತ್ತಿದ್ದ ಸಿರಾಜ್ ಈ ರೀತಿಯ ಉತ್ತಮ ಬೌಲಿಂಗ್ ಮಾಡುವುದರ ಮೂಲಕ ಹಿಂದೆ ಟ್ರೋಲ್ ಮಾಡಿದ್ದ ಜನಗಳಿಗೆ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಉತ್ತರವನ್ನು ನೀಡುತ್ತಿದ್ದಾರೆ.