18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಲು ಬಯಸಿದರೆ ನಾಳೆಯಿಂದಲೇ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.
www.cowin.gov.inಗೆ ಲಾಗ್ ಇನ್ ಆಗಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
* ಒಟಿಪಿ ಮೆಸೆಜ್ ಬಂದಾಕ್ಷಣ ಒಟಿಪಿ ನಮೂದಿಸಿ, ಪರಿಶೀಲನೆ ಬಟನ್ ಕ್ಲಿಕ್ ಮಾಡಿ
* ವ್ಯಾಕ್ಸಿನೇಷನ್ ಪುಟದ ನೋಂದಣಿ ತೆರೆದುಕೊಳ್ಳುತ್ತದೆ
* ಭಾವಚಿತ್ರ, ಐಡಿ ಪ್ರೂಫ್ ಜೊತೆಗೆ ಅಗತ್ಯವಿರುವ ವಿವರಗಳನ್ನು ತುಂಬಿರಿ
* ಬಳಿಕ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
* ನೋಂದಣಿ ಮುಗಿದ ಬಳಿಕ ನಿಮಗೆ ಖಾತೆ ವಿವರ ಪುಟ ತೆರೆದುಕೊಳ್ಳುತ್ತದೆ.ಖಾತೆ ವಿವರ ಪುಟದಲ್ಲಿ ನಿಮ್ಮ ನೇಮಕಾತಿಯನ್ನು ನಿಗದಿಪಡಿಸಬಹುದು