ಅತಿಯಾಗಿ ಆಡಬೇಡ ; ಕೃನಾಲ್ ಪಾಂಡ್ಯಗೆ ಕ್ಲಾಸ್

Date:

ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೃನಾಲ್ ಪಾಂಡ್ಯ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದರು. ಕೃನಾಲ್ ಆಟಕ್ಕೆ ಸಾಕಷ್ಟು ಮೆಚ್ಚುಗೆಗಳು ಸಹ ವ್ಯಕ್ತವಾದವು. ಆದರೆ ಇಂಗ್ಲೆಂಡ್ ವಿರುದ್ಧ ನೀಡಿದ ಉತ್ತಮ ಪ್ರದರ್ಶನವನ್ನು ಕೃನಾಲ್ ಪಾಂಡ್ಯ ಐಪಿಎಲ್ ಟೂರ್ನಿಯಲ್ಲಿ ಮುಂದುವರೆಸುವಲ್ಲಿ ಎಡವಿದ್ದಾರೆ. ಹೌದು ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಕೃನಾಲ್ ಪಾಂಡ್ಯ ಅಕ್ಷರಶಃ ಮಂಕಾಗಿದ್ದಾರೆ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ ಕೃನಾಲ್ ಪಾಂಡ್ಯ ಗಳಿಸಿರುವುದು ಕೇವಲ 29 ರನ್. ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿ ಕೂಡ ಕೃನಾಲ್ ಪಾಂಡ್ಯ ಮುಗ್ಗರಿಸಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೃನಾಲ್ ಪಾಂಡ್ಯ ಪಡೆದಿರುವುದು ಕೇವಲ 3 ವಿಕೆಟ್‍ಗಳು. ಇಷ್ಟೆಲ್ಲಾ ಕಳಪೆ ಪ್ರದರ್ಶನ ನೀಡಿದರೂ ಸಹ ಕೃನಾಲ್ ಪಾಂಡ್ಯ ಅವರನ್ನು ಯಾರೂ ಸಹ ಟ್ರೋಲ್ ಮಾಡಿರಲಿಲ್ಲ. ಆದರೆ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡುವ ವೇಳೆ ಬ್ಯಾಟ್ಸ್‌ಮನ್‌ ಬೌಂಡರಿ ಬಾರಿಸಿದರೆ ಕೃನಾಲ್ ಪಾಂಡ್ಯ ಅನೇಕ ಬಾರಿ ಫೀಲ್ಡರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾನು ಕೆಟ್ಟ ಬಾಲ್ ಎಸೆದ ಕಾರಣಕ್ಕೆ ಬ್ಯಾಟ್ಸ್‌ಮನ್‌ ಬೌಂಡರಿ ಬಾರಿಸಿದರೆ ಅದು ತನ್ನದೇ ತಪ್ಪಾಗಿರುತ್ತದೆ, ಆದರೆ ಕೃನಾಲ್ ಪಾಂಡ್ಯ ಮಾತ್ರ ತಾನು ಸರಿಯಾಗಿ ಬೌಲಿಂಗ್ ಮಾಡಿದ್ದೇನೆ ಆದರೆ ಫೀಲ್ಡರ್ ಸರಿಯಾಗಿ ಫೀಲ್ಡಿಂಗ್ ಮಾಡಿಲ್ಲ ಎಂದು ಫೀಲ್ಡರ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೃನಾಲ್ ಪಾಂಡ್ಯರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಉತ್ತಮ ಎಸೆತವನ್ನು ಹಾಕದೇ ಬೌಂಡರಿ ಬಾರಿಸಿಕೊಂಡು ಫೀಲ್ಡರ್ ಮೇಲೆ ಕೂಗಾಡುವ ಕೃನಾಲ್ ಪಾಂಡ್ಯ ತಾನು ಎಸೆಯುವ ಪ್ರತಿಯೊಂದು ಎಸೆತವನ್ನು ಈ ದಶಕದ ಅತ್ಯುತ್ತಮ ಎಸೆತವೆಂಬಂತೆ ನಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಕೃನಾಲ್ ಪಾಂಡ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ. ಮೈದಾನದಲ್ಲಿ ಸಹ ಆಟಗಾರರ ವಿರುದ್ಧ ಅತಿಯಾಗಿ ಆಡದೆ ಉತ್ತಮ ಬೌಲಿಂಗ್ ಮಾಡಲಿ ಎಂದು ನೆಟ್ಟಿಗರು ಕೃನಾಲ್ ಪಾಂಡ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...