ಒಬ್ಬ ಇಡೀ ಆರ್ ಸಿಬಿಯನ್ನು ಸೋಲಿಸಿಬಿಟ್ಟ : ಕೊಹ್ಲಿ

Date:

ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದ ಸತತ 4 ಪಂದ್ಯಗಳನ್ನು ಗೆದ್ದು ಗೆಲುವಿನ ಉತ್ತುಂಗದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿದೆ. ನಿನ್ನೆ ನಡೆದ ಪಂದ್ಯದಲ್ಲಿ 69 ರನ್‌ಗಳ ಜಯ ಸಾಧಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಆರ್ ಸಿಬಿಯನ್ನು ಕೆಳತಳ್ಳಿ ಅಗ್ರಸ್ಥಾನಕ್ಕೇರಿದೆ.

 

 

 

ಇನ್ನು ಪಂದ್ಯದಲ್ಲಿ ಸೋತ ಬಳಿಕ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಿಎಸ್ ಕೆ ಪರ ಅತ್ಯದ್ಭುತ ಪ್ರದರ್ಶನವನ್ನು ತೋರಿದ ಜಡೇಜಾ ಅವರನ್ನು ವಿರಾಟ್ ಕೊಹ್ಲಿ ಅವರು ಹೊಗಳಿದ್ದಾರೆ. ಜಡೇಜಾ ಅವರು ಏಕಾಂಗಿಯಾಗಿ ಇಡೀ ಆರ್ ಸಿಬಿಯನ್ನು ಸೋಲಿಸಿದ್ದಾರೆ, ಬ್ಯಾಟಿಂಗ್ ಮಾಡುವಾಗ ಅವರು ಆಡಿದ ಕೊನೆಯ ಓವರ್ ಅತ್ಯದ್ಭುತ , ಬೌಲಿಂಗ್ ನಲ್ಲಿಯೂ ಜಡೇಜಾ ಅತ್ಯುತ್ತಮ ಪ್ರದರ್ಶನ ತೋರಿದರು ಹಾಗೂ ಫೀಲ್ಡಿಂಗ್ ನಲ್ಲಿ ಕೂಡ ಜಡೇಜಾ ಮಿಂಚಿದರು. ಜಡೇಜಾ ಅವರ ಈ ಅತ್ಯದ್ಭುತ ಪ್ರಕಾಶನದಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿತು ಎಂದು ವಿರಾಟ್ ಕೊಹ್ಲಿ ಹೇಳಿದರು.

 

 

ನಮ್ಮ ತಂಡದ ವಿರುದ್ಧ ಜಡೇಜಾ ಅವರು ಇಷ್ಟು ಒಳ್ಳೆಯ ಪ್ರದರ್ಶನ ನೀಡಿದ್ದನ್ನು ನೋಡಿ ದುಃಖ ಪಡುವುದಕ್ಕಿಂತ ನನಗೆ ಖುಷಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ವಿರಾಟ್ ಕೊಹ್ಲಿ ಅವರು ಇಷ್ಟು ಸಂತೋಷ ಪಡಲು ಕಾರಣ ಜಡೇಜಾ ಅವರ ಆಟ ಏಕೆಂದರೆ ಜಡೇಜಾ ಅವರ ಈ ಆಟ ಮುಂಬರುವ ಇಂಟರ್ ನ್ಯಾಷನಲ್ ಟಿ ಟ್ವೆಂಟಿ ವಿಶ್ವಕಪ್ ಗೆ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಜಡೇಜಾ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಮುಂದಿನ ವಿಶ್ವಕಪ್ ಗೆ ಸಹಕಾರಿಯಾಗಲಿದೆ ಅಲ್ಲಿಯೂ ಸಹ ಜಡೇಜಾ ಅವರು ಇದೇ ರೀತಿ ಪ್ರದರ್ಶನ ತೋರುವುದರಿಂದ ನಮ್ಮ ಟೀಮ್ ಇಂಡಿಯಾಗೆ ಉಪಯೋಗ ಆಗಲಿದೆ ಎಂದು ವಿರಾಟ್ ತಿಳಿಸಿದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...