ಕೊರೋನಾವೈರಸ್.. ಈ ವೈರಸ್ ನಿಂದ ಜನ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಎಂಬುದು ಎಷ್ಟು ಸತ್ಯವೋ ಸರ್ಕಾರದ ತಪ್ಪು ನಿರ್ಧಾರಗಳಿಂದ ಕಷ್ಟವನ್ನು ಎದುರಿಸುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯ. ಇಂತಹ ಸಮಯದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ಮತ್ತು ಕೊರೊನಾ ಸೊಂಕಿತರ ಜೊತೆ ಆಸ್ಪತ್ರೆಯ ಸಿಬ್ಬಂದಿಗಳು ನಡೆದುಕೊಳ್ಳುತ್ತಿರುವ ರೀತಿ ಜನಸಾಮಾನ್ಯರನ್ನು ಯಾಕಾದರೂ ಮನುಷ್ಯರಾಗಿ ಹುಟ್ಟಿಬಿಟ್ಟೆವೋ ಎನ್ನುವಂತೆ ಮಾಡಿಬಿಟ್ಟಿದೆ.
ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದಕರ ಯುವತಿಯೋರ್ವಳು ಪ್ರಸ್ತುತ ಜನರು ಎದುರಿಸುತ್ತಿರುವ ಸಮಸ್ಯೆಯನ್ನಿಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರಿಗೆ ಖಡಕ್ಕಾಗಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪ್ರತಿಯೊಬ್ಬ ಕರ್ನಾಟಕದ ಪ್ರಜೆಯೂ ಯಡಿಯೂರಪ್ಪನವರನ್ನು ಕೇಳಬೇಕು ಎಂದುಕೊಂಡಿದ್ದಂತಹ ಪ್ರಶ್ನೆಗಳನ್ನು ಈ ಹುಡುಗಿ ಕೇಳಿಬಿಟ್ಟಿದ್ದಾಳೆ.
‘ಏನ್ ಸಾರ್ ಯಡಿಯೂರಪ್ಪನವರೇ ನಿಮಗೆ ಎಂಬತ್ತು ವರ್ಷ ವಯಸ್ಸಾಗಿದೆ ನಿಮಗೆ ಎರಡನೇ ಬಾರಿ ಕೊರೋನಾವೈರಸ್ ಬಂತು, ಆದರೆ ನೀವು ಕೇವಲ ಮೂರೇ ದಿನದಲ್ಲಿ ಗುಣಮುಖರಾದ್ರಿ ಸಾಮಾನ್ಯ ಜನರಿಗೆ ಕೊರೋನಾವೈರಸ್ ತಗುಲಿದರೆ ಹದಿನೈದರಿಂದ ಇಪ್ಪತ್ತು ದಿನ ಬೇಕು, ನಮ್ಮಂಥ ಇಪ್ಪತ್ತು ಇಪ್ಪತ್ತೈದು ವರ್ಷದ ಯುವಕ ಯುವತಿಯರೇ ಹದಿನೈದು ಇಪ್ಪತ್ತು ದಿನಗಳ ಕಾಲ ನರಳುತ್ತಿದ್ದೇವೆ. ಹೀಗಿರುವಾಗ ಎಂಬತ್ತು ವರ್ಷದ ನೀವು ಕೇವಲ ಮೂರೇ ದಿನದಲ್ಲಿ ಗುಣಮುಖರಾಗಿದ್ದೀರ, ನಮಗೇ ಇಲ್ಲದ ಇಮ್ಯೂನಿಟಿ ಪವರ್ ನಿಮಗೆ ಇದೆಯಾ?’ ಎಂದು ಯಡಿಯೂರಪ್ಪನವರಿಗೆ ಪ್ರಶ್ನೆ ಎಸೆದಿದ್ದಾಳೆ.
ಇನ್ನೂ ಮುಂದುವರೆದು ಮಾತನಾಡಿದ ಈ ಯುವತಿ ನಮಗೆ ಯಾಕೆ ಬೇಗ ಕೊರೋನಾವೈರಸ್ ಗುಣವಾಗುವುದಿಲ್ಲ ಎಂದರೆ ಆಸ್ಪತ್ರೆಗಳಲ್ಲಿ ದುಡ್ಡನ್ನು ವಸೂಲಿ ಮಾಡಲು ರೋಗ ಇಲ್ಲದಿದ್ದರೂ ರೋಗ ಇದೆ ಎಂದು ಹೇಳುತ್ತಿದ್ದಾರೆ. ಲಕ್ಷ ಲಕ್ಷ ಬಿಲ್ ಕಟ್ಟುತ್ತಾ ಇದ್ದೇವೆ ಸಾರ್ ಎಂದು ಬಿಲ್ ಸಾಕ್ಷಿ ಸಮೇತ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾಳೆ. ನಾವೇನೋ ಲಕ್ಷ ಲಕ್ಷ ಕಟ್ಟುತ್ತಾ ಇದ್ದೇವೆ ಆದರೆ ಆ ದುಡ್ಡಿಗೆ ಸರಿಯಾದ ಚಿಕಿತ್ಸೆಯನ್ನು ಕೊಡ್ತಿಲ್ಲ ಮಾತ್ರೆಗಳನ್ನು ಕೊಡ್ತಿಲ್ಲ.. ದುಡ್ಡು ಕಿತ್ಕೊಂಡು ಅವರವರು ಚೆನ್ನಾಗಿ ದುಡ್ಡು ಮಾಡ್ತಾ ಇದ್ದಾರೆ ಅಷ್ಟೆ ಎಂದು ಈ ಯುವತಿ ದಿಟ್ಟವಾಗಿ ಮಾತನಾಡಿದ್ದಾಳೆ. ಪ್ರಸ್ತುತ ಇರುವ ಪರಿಸ್ಥಿತಿಯ ಮುಖವಾಡವನ್ನು ಯಾವುದೇ ಭಯವಿಲ್ಲದೆ ಬಿಚ್ಚಿಟ್ಟ ಈ ಯುವತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರತಿಯೊಬ್ಬ ಯುವಕ ಮತ್ತು ಯುವತಿಯರು ಸಹ ಈ ರೀತಿ ಪ್ರಶ್ನೆಗಳನ್ನು ಹಾಕಿ ಸಮಾಜವನ್ನು ಸರಿದಾರಿಗೆ ತರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.