ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಇನ್ಫೋಸಿಸ್ ಎಂಬ ದೊಡ್ಡ ಐಟಿ ಕಂಪನಿಯನ್ನು ಕಟ್ಟಿದ ಈ ಇಬ್ಬರು ಕನ್ನಡಿಗ ದಂಪತಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ಕೊಂಚವೂ ಅಹಂ ಎನ್ನುವುದನ್ನ ಎಲ್ಲೂ ತೋರಿಸಿಯೇ ಇಲ್ಲ. ತಮಗೆ ಬಂದ ಲಾಭವನ್ನು ತಮ್ಮ ಸ್ವಂತಕ್ಕಾಗಿ ಬಳಸುವ ಹಲವಾರು ಮಾಲೀಕರ ನಡುವೆ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ವಿಭಿನ್ನವಾಗಿ ನಿಲ್ಲುತ್ತಾರೆ.
ಕನ್ನಡ ಜನತೆಗೆ ಕಷ್ಟ ಬಂತೆಂದರೆ ಸಾಕು ಓಡೋಡಿ ಬಂದು ಕೋಟಿ ಕೋಟಿ ಹಣವನ್ನು ನೀಡಿ ಕನ್ನಡಿಗರ ಬೆನ್ನಿಗೆ ನಿಲ್ಲುತ್ತಾರೆ. ಕಳೆದ ಬಾರಿ ಕೊರೋನಾವೈರಸ್ ಸುಬ್ಬಂದು ಕರ್ನಾಟಕ ರಾಜ್ಯ ನಲುಗಿದಾಗ ಮತ್ತು ನೆರೆ ಪ್ರವಾಹ ಉಂಟಾಗಿದ್ದಾಗ ಇದೆ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ಕೋಟಿ ಕೋಟಿ ದುಡ್ಡು ನೀಡಿ ಹಲವಾರು ಕುಟುಂಬಗಳಿಗೆ ಮನೆ ಬೆಳಕಾಗಿದ್ದರು.
ಇದೀಗ ಆಕ್ಸಿಜನ್ ಕೊರತೆ ರಾಜ್ಯಾದ್ಯಂತ ತಲೆದೋರಿತು ಕೊರೋನಾವೈರಸ್ ತಪ್ಪಿರುತ್ತದೆ ಕರ್ನಾಟಕದ ಹೋರಾಟಕ್ಕೆ ಸುಧಾಮೂರ್ತಿಯವರು ನೂರು ಕೋಟಿ ದೇಣಿಗೆಯನ್ನು ನೀಡಿದ್ದಾರೆ. ಹೀಗೆ ಕನ್ನಡಿಗರನ್ನು ರಕ್ಷಿಸಲು ನೂರು ಕೋಟಿ ದೇಣಿಗೆ ನೀಡುವುದರ ಮೂಲಕ ಸುಧಾಮೂರ್ತಿಯವರು ಮತ್ತೊಮ್ಮೆ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮಗೆ ಮತ ಹಾಕಿ ಗೆಲ್ಲಿಸಿದ ಜನರ ಕಷ್ಟಕ್ಕೆ ತಮ್ಮ ಸ್ವಂತ ದುಡ್ಡಿನಿಂದ ಒಂದೇ ಒಂದು ಬಿಡಿಗಾಸನ್ನೂ ಬಿಚ್ಚದ ರಾಜಕಾರಣಿಗಳ ನಡುವೆ ನೂರುಕೋಟಿ ಕೊಟ್ಟಿರುವ ಸುಧಾಮೂರ್ತಿ ಅವರು ನಿಜಕ್ಕೂ ಗ್ರೇಟ್..