ಇಡೀ ದೇಶವೇ ಕೊರೋನಾವೈರಸ್ ಎರಡನೇ ಅಲೆಯಿಂದ ಅಕ್ಷರಶಃ ನಲುಗಿಹೋಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ದೇಶದಲ್ಲಿ ವೈದ್ಯಕೀಯ ಸಮಸ್ಯೆ ಹೆಚ್ಚಾಗಿರುವುದನ್ನು ಮನಗಂಡ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 7 ಕೋಟಿ ಹಣವನ್ನು ಸಂಗ್ರಹಿಸಿ ಕೊರುನಾ ವಿರುದ್ಧದ ಹೋರಾಟಕ್ಕೆ ನೀಡಲು ಅಭಿಯಾನವನ್ನು ಆರಂಭಿಸಿದ್ದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಈ ಅಭಿಯಾನಕ್ಕೆ 2 ಕೋಟಿ ದೇಣಿಗೆ ನೀಡಿದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡೆಸುತ್ತಿರುವ ಈ ಅಭಿಯಾನಕ್ಕೆ ಹಲವಾರು ಜನ ಸಾಮಾನ್ಯರು, ಸೆಲೆಬ್ರಿಟಿಗಳು ಮತ್ತು ವ್ಯವಹಾರಸ್ಥರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಕೂಡ 95000 ದೇಣಿಗೆಯನ್ನು ನೀಡಿದ್ದಾರೆ.
ಯುಜುವೇಂದ್ರ ಚಹಲ್ ಈ ಮೊತ್ತವನ್ನು ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಜನರು ಯುಜುವೇಂದ್ರ ಚಹಲ್ ಅವರನ್ನು ಟ್ರೋಲ್ ಮಾಡುವುದಕ್ಕೆ ಗಂಭೀರವಾದ ಕಾರಣವೂ ಕೂಡ ಇದೆ. ನಿಮ್ಮ ವೈಯಕ್ತಿಕ ದೇಣಿಗೆಯನ್ನು ಕೇಳುವ ಹಕ್ಕು ನಮಗಿಲ್ಲ ಆದರೂ ಒಬ್ಬ ಸೆಲೆಬ್ರಿಟಿಯಾಗಿ ಕೋಟಿ ಕೋಟಿ ದುಡ್ಡನ್ನು ಕೇವಲ ಐಪಿಎಲ್ ನಿಂದಲೇ ಪಡೆಯುತ್ತೀರಾ, ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೋಟಿಕೋಟಿ ದುಡಿಯುತ್ತೀರಾ, ಜಾಹೀರಾತು ಇತರೆ ಕಾರ್ಯಕ್ರಮಗಳಲ್ಲಿ ಲೆಕ್ಕವಿಲ್ಲದಷ್ಟು ಹಣವನ್ನು ಪಡೆಯುತ್ತೀರ ಮತ್ತು ಈ ಹಣದಿಂದ ನಿಮ್ಮದೇ ಆದ ಹಲವಾರು ವ್ಯವಹಾರಗಳನ್ನು ನಡೆಸುತ್ತೀರಾ.. ಇಷ್ಟೆಲ್ಲಾ ಲಾಭವನ್ನು ಹೊಂದಿರುವ, ಕೋಟಿ ಕೋಟಿ ಹಣವನ್ನು ಹೊಂದಿರುವ ನಿಮಗೆ ಕೇವಲ 95000 ನೀಡಲು ಹೇಗಾದ್ರೂ ಮನಸ್ಸು ಬಂತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅದರಲ್ಲೂ ಚಹಲ್ ಮೂರು ತಿಂಗಳಿಗೊಮ್ಮೆ ಬದಲಾಯಿಸೋ ಮೊಬೈಲ್ ನ ಬೆಲೆಯೇ ಲಕ್ಷಾಂತರ ರೂಪಾಯಿ ಇರುವಾಗ ದೇಣಿಗೆ ಅಂತ 95 ಸಾವಿರ ಕೊಟ್ಟಿದ್ದು ಸರಿನಾ ಅಂತ ತುಂಬಾ ಜನ ಕೇಳ್ತಾ ಇದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಭಿಯಾನದಡಿ ಕೆಲ ವ್ಯವಹಾರಸ್ಥರೇ 5 ಲಕ್ಷ & 10 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವವರೇ 5ಲಕ್ಷ & 10 ಲಕ್ಷ ಕೊಡುತ್ತಿರಬೇಕಾದರೆ ಕೋಟ್ಯಂತರ ರೂಪಾಯಿ ಹೊಂದಿರುವ ಚಹಲ್ 95000 ಕೊಟ್ಟಿದ್ದು ನಿಜಕ್ಕೂ ಸರಿಯಾದ ನಡೆ ಅಲ್ಲವೇ ಅಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಐಪಿಎಲ್ ಸೀಸನ್ ಗೆ ಚಾಹಲ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6ಕೋಟಿ ರೂಪಾಯಿಗಳನ್ನು ನೀಡುತ್ತದೆ. ಇದರ ಜೊತೆ ಪಂದ್ಯಶ್ರೇಷ್ಠ ಪ್ರಶಸ್ತಿ, ಆ ಪ್ರಶಸ್ತಿ, ಈ ಪ್ರಶಸ್ತಿ ಎಂದು ಲಕ್ಷಾಂತರ ರೂಪಾಯಿ ಕೂಡ ಬರುತ್ತದೆ. ಕೇವಲ ಎರಡೇ 2ತಿಂಗಳು ನಡೆಯುವ ಐಪಿಎಲ್ ನಲ್ಲಿಯೇ 6 ಕೋಟಿಗೂ ಅಧಿಕ ಬಾಚಿಕೊಳ್ಳುವ ಯುಜುವೇಂದ್ರ ಚಾಹಲ್ 95 ಸಾವಿರ ಕೊಟ್ಟಿದ್ದು ನಿಮ್ಮ ಪ್ರಕಾರ ಸರಿ ಎನಿಸುತ್ತಾ? ಕಾಮೆಂಟ್ ಮಾಡಿ..