ರಾಜೀನಾಮೆ ನೀಡಿ ರಾಜ್ಯಾದ್ಯಂತ ಸುದ್ದಿಯಾಗಿರುವ ಡಿವೈಎಸ್‍ಪಿ ಅನುಪಮಾ ಶಣೈ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಸ್ಟೇಟಸ್‍ಗಳು ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಹಾಗೂ ಸರಕಾರಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಹೇಳಿರುವಂತೆ ಅನುಪಮಾ ಶಣೈ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ! ಏತನ್ಮಧ್ಯೆ ಅನುಪಮಾರವರು ತೀರ್ಥಹಳ್ಳಿ,ನರಸಿಂಹರಾಜಪುರದ ಗಡಿಭಾಗದ ಗ್ರಾಮವೊಂದರಲ್ಲಿ ತಮ್ಮ ಆಪ್ತರ ಮನೆಯಲ್ಲಿ ತಂಗಿದ್ದರು ಎಂದು ವರದಿಯಾಗಿದೆ! ತಮ್ಮ ನಿವಾಸದಲ್ಲಿ ಅವರು ಉಳಿದರೆ ಅಧಿಕಾರಿಗಳು ಬರಬಹುದು, ಮಾಧ್ಯಮದವರು ಮುಗಿ ಬೀಳಬಹುದು ಎಂದು ಮರೆಯಾಗಿ ಫೇಸ್‍ಬುಕ್ ಸ್ಟೇಟಸ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ ನಾಯಕರ “ಪ್ರೇಮಪ್ರಸಂಗ’ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿ, ಅದ್ಯಾಕೋ ಹಿಂದೇಟು ಹಾಕುತ್ತಿದ್ದಾರೆ. ಮಾಧ್ಯಮಿಗಳು ಸೇರಿದಂತೆ ಅನೇಕರು ಪರಮೇಶಿ ಪ್ರೇಮಪ್ರಸಂಗಕ್ಕೆ ಕಾದು ಕುಳಿತಿದ್ದಾರೆ! ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿ ಮಾದ್ಯಮದ ಮುಂದೆ ಬಂದ ಅವರು, ಬಳ್ಳಾರಿ ಎಸ್‍ಪಿ ಚೇತನ್ ಅವರ ಜೊತೆ ಇಂದು ಸಂಜೆ ಮೀಟಿಂಗ್ ಮಾಡುವುದಾಗಿ ಹೇಳಿದ್ದಾರೆ.
ಅವರು ಇಂದು ಸಂಜೆ ಏನ್ ಮಾತಾಡ್ತಾರೋ ಅದು ಆಮೇಲಿನ ವಿಷಯ. ಆದರೆ, ಇದೀಗ ಬಂದ ಮಾಹಿತಿಯಂತೆ ಅನುಪಮಾ ಕೂಡ್ಲಿಗೆಯ ತಮ್ಮ ನಿವಾಸದಲ್ಲೇ ಇದ್ದು ಫೇಸ್‍ಬುಕ್ ಮೂಲಕ ಎಂದಿನಂತೆ ಸ್ಟೇಟಸ್ ಅಪ್‍ಡೇಟ್ ಮಾಡ್ತಾ ಇದ್ದಾರೆ! ಯಾರಿಗೂ ಮಾತಿಗೆ ಸಿಗದೆ ಸ್ಟೇಟಸ್ ಚಾಟಿ ಬೀಸುತ್ತಿದ್ದಾರೆ! ಕೂಡ್ಲಿಗೆ ಪ್ರಭಾರಿ ಡಿವೈಎಸ್‍ಪಿ ಎಸ್.ಆರ್ ಪಾಟೀಲ್ ಅವರು ಅನುಪಮಾರ ಮನೆಗೆ ಹೋದರೂ ಬಾಗಿಲು ತೆರದಿಲ್ಲ! ಇವೆಲ್ಲಕ್ಕಿಂತ ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾದ, ಚಿಂತಿಸಬೇಕಾದ ಒಂದು ಸ್ಟೇಟಸ್ ಹಾಕಿದ್ದಾರೆ! ಅವರು ಹಾಕಿರೋ ಸ್ಟೇಟಸ್ ಅವರೆಷ್ಟು ಕುಗ್ಗಿದ್ದಾರೆ ಎಂದು ಹೇಳುತ್ತಿದೆ!
ಹೌದು ಅನುಪಮಾ ಶಣೈ,
“ಸರಿ, ಯಾರಿಗೂ ನನ್ನ ಮಾತು ಅರ್ಥ ಆಗುತ್ತಿಲ್ಲ
ನ್ಯೂಸ್ ಚಾನಲ್‍ಗಳಿಗೆ ನ್ಯೂಸ್ ಮಾತ್ರ ಬೇಕು
ಅಧಿಕಾರಿಗಳಿಗೆ ಅವರ ದರ್ಪ ಬೇಕು
ಜನರಿಗೆ ಹಠ ಸಾಧನೆ ಆಗಬೇಕು.
ನನಗೆ ನನ್ನ ಪ್ರಾಣ ಉಳಿಯಬೇಕು
#ಯಾಕೋಡಿಕೆರವಿನೆನಪಾಗ್ತಿದ್ದಾರೆ ಎಂದಿ ಸ್ಟೇಟಸ್ ಹಾಕಿದ್ದಾರೆ!
ಈ ಸ್ಟೇಟಸ್ ಹಲವಾರು ಊಹಾಪೋವಗಳಿಗೆ ಕಾರಣವಾಗಿದೆ! ಅನುಪಮಾರವರಿಗೆ ಕೊಲೆಬೆದರಿಕೆ ಇದೆಯಾ? ಅಥವಾ ಅವರು ನೊಂದು, ತುಂಬಾ ಬೇಜಾರಲ್ಲಿದ್ದಾರ? ಯಾವುದು ಅರ್ಥ ಆಗುತ್ತಿಲ್ಲ! ಅಷ್ಟೇ ಅಲ್ಲ ಸಿಡಿ ಬೇಕು, ಸಿಡಿ ಬೇಕು ಎಂದು ಹಿಂದೆ ಬಿದ್ದಿರುವವರಿಗೂ ಶಣೈ ಸ್ಟೇಟಸ್ ಮೂಲಕ ಕಿವಿಹಿಂಡಿದ್ದಾರೆ! ಅದ್ಯಾಕೆ ಸಿಡಿ ಸಿಡಿ ಅಂತ ಬಡ್ಕೋತಾರೋ. ಸರಕಾರ ಅಂತರ್ಜಾಲದಲ್ಲಿ ಫೋನೋಗ್ರಫಿ ನಿರ್ಬಂಧಿಸಿದಾಗ ಸಿಡಿದವರು ನೀವು”‘
#ಇಷ್ಟು ಸಿಡಿದಿದ್ದು ಸಾಕಾಗಿಲ್ಲ
#ನಾನಲ್ಲ ಜನ ನ್ಯೂಸ್ ಆಗ್ಬೇಕು ಎಂದು ಸ್ಟೇಟಸ್ ಹಾಕಿದ್ದಾರೆ.
ಈ ಎಲ್ಲದರ ನಡುವೆ ರಾಜೀನಾಮೆ ನೀಡಿದ ಬಳಿಕ ಮೊದಲಸಲ ಮಾಧ್ಯಮದ ಮುಂದೆ ಬಂದ ಅನುಪಮಾ ಶೆಣೈ ಬಳ್ಳಾರಿ ಎಸ್‍ಪಿ ಚೇತನ್ ಅವರ ಜೊತೆ ಇಂದು ಸಂಜೆ ಮಾತನಾಡುವುದಾಗಿ (ಮೀಟಿಂಗ್ ) ಹೇಳಿದ್ದಾರೆ. ಅಷ್ಟುಬಿಟ್ಟು ಬೇರೇನೂ ಹೇಳಿಲ್ಲ.! ಇಂದು ಸಂಜೆ ಚೇತನ್ ಅವರ ಜೊತೆ ಮೀಟಿಂಗ್ ಮಾಡುತ್ತಾರೋ, ಅನುಪಮಾ ಮಾತಿಗೆ ಸಿಗ್ತಾರಾ ಕಾದು ನೋಡ್ಬೇಕು
Anupama Shenoy Video :
POPULAR STORIES :
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!