ಕೊರೋನಾವೈರಸ್ ಹಾವಳಿಯಿಂದ ಇಡೀ ದೇಶವೇ ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆಕ್ಸಿಜನ್ ಸಿಗದೆ ಹಲವಾರು ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.
ಇತ್ತ ರಾಜ್ಯ ಸರ್ಕಾರ ಕೊರೊನಾ ಸೊಂಕು ಹಬ್ಬುವುದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಿದೆ. ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ತರುವಾಯ ದಿನಗೂಲಿ ನಂಬಿ ಬದುಕು ಸಾಗಿಸುತ್ತಿದ್ದ ಜನರ ಕಷ್ಟ ಹೇಳತೀರದಂತಾಗಿದೆ. ದಿನದ ಊಟಕ್ಕೆ ಪರದಾಡುವಂತಹ ಹಲವಾರು ಬಡ ಕುಟುಂಬಗಳು ಯಾರಾದರೂ ಊಟಕ್ಕೆ ಸಹಾಯ ಮಾಡಿದರೆ ಸಾಕು ಎಂದು ಸಹಾಯ ಹಸ್ತವನ್ನು ಕಾಯುತ್ತಾ ಕುಳಿತಿವೆ.
ಹೀಗೆ ಕಷ್ಟದಲ್ಲಿರುವ ಜನರಿಗೆ ಹಲವಾರು ಕಲಾವಿದರು ಸಹಾಯವನ್ನು ಮಾಡುತ್ತಿದ್ದು ನಮ್ಮ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಕೂಡ ತಮ್ಮ ನಾಗವಾರ ಏರಿಯಾದಲ್ಲಿ ದಿನನಿತ್ಯ 500 ಜನರಿಗೆ ಉಚಿತ ಟೀ ಕಾಫಿ ಮತ್ತು ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹೌದು ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ದಿನನಿತ್ಯ 500 ಜನರಿಗೆ ಆಸರೆ ಎಂಬ ಯೋಜನೆಯಡಿ ಉಚಿತ ಊಟ ತಿಂಡಿ ಟೀ ಮತ್ತು ಕಾಫಿ ವ್ಯವಸ್ಥೆಯನ್ನು ಮಾಡುವುದರ ಮೂಲಕ ಊಟವಿಲ್ಲದ ಜನರಿಗೆ ನೆರವು ನೀಡುತ್ತಿದ್ದಾರೆ.