ನಾನು ಕಾಲಿಸ್, ವಾಟ್ಸನ್ ರೇಂಜಿನ ಆಟಗಾರ: ವಿಜಯ್ ಶಂಕರ್

Date:

ವಿಜಯ್ ಶಂಕರ್ 2019ರ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪರ ಆಡಲು ಆಯ್ಕೆಯಾದಾಗಿನಿಂದಲೂ ಸಾಕಷ್ಟು ಚರ್ಚೆಗೀಡಾಗುತ್ತಿದ್ದಾರೆ ಮತ್ತು ಟ್ರೋಲ್‌ಗಳಿಗೆ ಒಳಗಾಗುತ್ತಿದ್ದಾರೆ. 2019ರ ವಿಶ್ವಕಪ್ ತಂಡಕ್ಕೆ ಅಂಬಾಟಿ ರಾಯುಡು ಬದಲು ವಿಜಯ್ ಶಂಕರ್ ಆಯ್ಕೆಯಾದಾಗ ಅಂಬಾಟಿ ರಾಯುಡು ಮಾಡಿದ್ದ ‘3D’ ಟ್ವೀಟ್‌ನಿಂದ ಶುರುವಾದ ವಿಜಯ್ ಶಂಕರ್ ಮೇಲಿನ ಟ್ರೋಲ್ ಇಂದಿಗೂ ಸಹ ‘3D ಪ್ಲೇಯರ್’ ಎಂಬ ಟ್ಯಾಗ್‌ನೊಂದಿಗೆ ಮುಂದುವರಿಯುತ್ತಿದೆ.

 

ಇನ್ನು ಇತ್ತೀಚಿಗಷ್ಟೆ ವಿಜಯ್ ಶಂಕರ್ ಸಂದರ್ಶನವೊಂದರಲ್ಲಿ ಟೀಮ್ ಇಂಡಿಯಾ ಪರ ಕಳೆದ ವಿಶ್ವಕಪ್ ಟೂರ್ನಿಯಲ್ಲಿ ತಾನು ಆಡಿದ ಆಟ ಮತ್ತು ತನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲ್ ಕುರಿತು ಮಾತನಾಡಿದ್ದಾರೆ. ಇದೇ ಸಂದರ್ಶನದಲ್ಲಿ ತಾನು ಆಡುವ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ವಿಜಯ್ ಶಂಕರ್ ತನ್ನನ್ನು ಆರಂಭಿಕ ಬ್ಯಾಟ್ಸ್‌ಮನ್‌ ಅಥವಾ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಸಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಹೀಗೆ ತನ್ನನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಸಬೇಕು ಎಂದು ಹೇಳುವಾಗ ವಿಜಯ್ ಶಂಕರ್ ತನ್ನನ್ನು ತಾನು ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ಜೊತೆ ಹೋಲಿಕೆ ಮಾಡಿಕೊಂಡಿದ್ದಾರೆ. ‘ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ಅವಕಾಶವನ್ನು ನೀಡಿದರೆ ನಾನೂ ಕೂಡ ವಿಶ್ವಶ್ರೇಷ್ಠ ಆಲ್‌ರೌಂಡರ್‌ಗಳಾದ ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ರೀತಿ ಉತ್ತಮ ಆರಂಭಿಕ ಬ್ಯಾಟಿಂಗ್ ಮಾಡುವುದರ ಜೊತೆ ಉತ್ತಮ ಬೌಲಿಂಗ್ ಕೂಡ ಮಾಡಬಲ್ಲೆ’ ಎಂದು ಹೇಳುವುದರ ಮೂಲಕ ವಿಜಯ್ ಶಂಕರ್ ತನ್ನನ್ನು ತಾನು ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ಜೊತೆ ಹೋಲಿಕೆ ಮಾಡಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...