ದೇಶದಲ್ಲಿ ಕೊವಿಡ್ -19 ಸಾಂಕ್ರಾಮಿಕ ಎರಡನೇ ಅಲೆಯು ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ಉಪಯೋಗವಾಗಲೆಂದು ಟೆಲಿಕಾಂ ಸಂಸ್ಥೆಗಳು ಆಕರ್ಷಕ ಆಫರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಪೈಕಿ ಸದ್ಯ ಭಾರತೀಯ ಏರ್ ಟೆಲ್ ಎರಡು ಆಫರ್ ಗಳನ್ನು ಘೋಷಿಸಿದೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ 49ರೂ.ಗಳ ಉಚಿತ ರಿಚಾರ್ಜ್ ಘೋಷಿಸಿದೆ. ಇದಲ್ಲದೆ 79ರೂ. ರಿಚಾರ್ಜ್ ಕೂಪನ್ ಖರೀದಿಸುವ ಪ್ರೀಪೇಡ್ ಗ್ರಾಹಕರಿಗೆ ಡಬಲ್ ಪ್ರಯೋಜನವನ್ನು ತಿಳಿಸಿದೆ.
ಲಾಕ್‌ಡೌನ್‌ಗಳಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಕಡಿಮೆ-ಆದಾಯದ ಗ್ರಾಹಕರಿಗೆ ಹಾಗೂ ಆನ್‌ಲೈನ್‌ನಲ್ಲಿ ತಮ್ಮ ಫೋನ್‌ಗಳನ್ನು ಹೇಗೆ ರೀಚಾರ್ಜ್ ಮಾಡುವುದನ್ನು ತಿಳಿದಿಲ್ಲದ ಗ್ರಾಹಕರಿಗೆ ಏರ್‌ಟೆಲ್ ಟೆಲಿಕಾಂ ಈ ಉಚಿತ ರೀಚಾರ್ಜ್ ಕೊಡುಗೆ ನೀಡಿದೆ. ಈ ಮೂಲಕ ಗ್ರಾಹಕರು ಅವರ ಪ್ರೀತಿಪಾತ್ರರೊಂದಿಗೆ ಕರೆ ಮಾಡಲು ಮತ್ತು ಸಂಪರ್ಕಿಸಲು ಸಾಧ್ಯವಾಗಿಸುವುದಾಗಿದೆ. ಈ ಯೋಜನೆಯೂ ಮುಂದಿನ ವಾರದಿಂದ ಶುರುವಾಗಲಿದೆ ಎಂದು ಏರ್ ಟೆಲ್ ಸಂಸ್ಥೆ ತಿಳಿಸಿದೆ.
ಭಾರ್ತಿ ಏರ್‌ಟೆಲ್ ಟೆಲಿಕಾಂನ 49 ರೂ. ಪ್ಯಾಕ್ ರಿಚಾರ್ಜ್ ಮಾಡಿಕೊಂಡರೆ 38 ರೂ. ಟಾಕ್‌ಟೈಮ್ ಸಿಗಲಿದೆ. ಮತ್ತು 100 ಎಂಬಿ ಡೇಟಾ ಸೌಲಭ್ಯ ಸಿಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಯಾಕ್ ಅನ್ನು ಬಳಕೆದಾರರಿಗೆ ಏರ್‌ಟೆಲ್ ಯಾವುದೇ ಶುಲ್ಕವಿಲ್ಲದೆ ನೀಡುತ್ತಿದೆ. ಇದರ ಜೊತೆ ಏರ್‌ಟೆಲ್ 79ರೂ. ಪ್ಯಾಕ್ ರೀಚಾರ್ಜ್ ಯೋಜನೆಯು 128ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ವಾಯಿಸ್ ಕರೆ ಪ್ರಯೋಜನ ಮುಗಿತ ಬಳಿಕ ಪ್ರತಿ ನಿಮಿಷದ ವಾಯಿಸ್ ಕರೆ 60 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ. ಇದಲ್ಲದೆ, 200MB ಡೇಟಾದ ನಂತರದ ಬಳಕೆ, ಪ್ರತಿ MB ಡೇಟಾವು 50 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ.

ಈ ಉಪಕ್ರಮದ ಮೂಲಕ, ಭಾರತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸುಮಾರು 55 ಮಿಲಿಯನ್ (5.5 ಕೋಟಿ) ಕಡಿಮೆ ಆದಾಯದ ಗ್ರಾಹಕರಿಗೆ ಸಹಾಯ ಮಾಡಲು ಕಂಪನಿಯು ಉದ್ದೇಶಿಸಿದೆ. ಏರ್‌ಟೆಲ್ ಗ್ರಾಹಕರಿಗೆ ನೀಡುತ್ತಿರುವ ಒಟ್ಟು ಲಾಭಗಳು 270 ಕೋಟಿ ರೂ. ಈ ಕೊಡುಗೆಯು ಸೋಂಕಿತ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನವೀಕರಿಸಲಾಗುತ್ತದೆ.