ಸುಶೀಲ್ ಕುಮಾರ್ ಗೆ ಮರಣ ದಂಡನೆ ವಿಧಿಸಿ : ಸಾಗರ್ ತಾಯಿ

Date:

ಸೋನಿಪತ್: ಕುಸ್ತಿಪಟು ಸಾಗರ್​ ರಾಣಾ ಕೊಲೆಗೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು 18 ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ. ಈ ಸಂದರ್ಭದಲ್ಲಿ ‘ಈಟಿವಿ ಭಾರತ’ ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ತಂದೆ ಹಾಗೂ ನಿವೃತ್ತ ದೆಹಲಿ ಪೊಲೀಸ್​ ಅಧಿಕಾರಿಯಾರಿಯಾಗಿರುವ ಆಶೋಕ್ ಧಾಂಖರ್- “ನಮಗೆ ನ್ಯಾಯ ಸಿಗಬೇಕು, ದೆಹಲಿ ಪೊಲೀಸರ ಮೇಲೆ ವಿಶ್ವಾಸವಿದೆ.” ಎಂದಿದ್ದಾರೆ.

ಸಾಗರ್ ತಾಯಿ ಸವಿತಾ ಧಾಂಖರ್ ಮಾತನಾಡಿ, “ಆರೋಪಿ ಸುಶೀಲ್ ಕುಮಾರ್​ಗೆ ಮರಣದಂಡನೆ ಶಿಕ್ಷೆಯಾಗಬೇಕು. ಜೊತೆಗೆ ಸುಶೀಲ್​ ಪಡೆದಿರುವ ಎಲ್ಲಾ ಮೆಡಲ್ ಮತ್ತು ಗೌರವಾನ್ವಿತ ಪ್ರಶಸ್ತಿಗಳನ್ನು ವಾಪಸ್​ ಪಡೆಯಬೇಕು. ಸ್ಟೇಡಿಯಂನಿಂದ ಮತ್ತು ಕುಸ್ತಿ ಕ್ರೀಡಾ ವಿಭಾಗದಿಂದ ಸುಶೀಲ್ ಕುಮಾರ್​ರನ್ನು ತೆಗೆದು ಹಾಕಬೇಕು.” ಎಂದು ಹೇಳಿದ್ದಾರೆ.

ಪೊಲೀಸರ ವರದಿ ಪ್ರಕಾರ ಮೇ 4 ರಂದು ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಛತ್ರಸಾಲ್​ ಸ್ಟೇಡಿಯಂಗೆ ಸಾಗರ್ ಮತ್ತು ಅವರ ಸ್ನೇಹಿತರನ್ನು ಕರೆತಂದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಸಾಗರ್ ಮೃತಪಟ್ಟರೆ, ಸ್ನೇಹಿತರು ಗಾಯಗೊಂಡಿದ್ದರು. ಸಾಗರ್​ ಮೃತಪಟ್ಟ ನಂತರ ಸುಶೀಲ್ ಕುಮಾರ್ ನಾಪತ್ತೆಯಾಗಿದ್ದರು. ಕೊನೆಗೆ ಮೇ 23ರಂದು ದೆಹಲಿ ಪೊಲೀಸರಿಂದ ಬಂಧನವಾಗಿದ್ದರು.​

 

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...