ರೋಹಿತ್ ಬಗ್ಗೆ ಕೇವಲವಾಗಿ ಮಾತನಾಡಬೇಡ ಅಮೀರ್: ಕನೇರಿಯಾ

Date:

ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ವೇಗಿ ಮೊಹಮ್ಮದ್ ಅಮೀರ್, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬಗ್ಗೆ ಕಾಮೆಂಟ್ ಮಾಡಿದ್ದರು. ರೋಹಿತ್‌ಗೆ ಬೌಲಿಂಗ್‌ ಮಾಡೋದು ತುಂಬಾ ಸುಲಭ ಎಂದು ಅಮೀರ್ ಹೇಳಿಕೆ ನೀಡಿದ್ದರು. ಇದಕ್ಕೆ ಪಾಕ್ ಮಾಜಿ ಸ್ಪಿನ್ನರ್ ದನೀಶ್ ಕನೇರಿಯಾ ತಿರುಗೇಟು ನೀಡಿದ್ದಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮೊಹಮ್ಮದ್ ಅಮೀರ್, ತಾನು ಈಗ 29ರ ಹರೆಯದವನಾಗಿದ್ದರೂ ಯಾಕೆ ಇಷ್ಟು ಬೇಗ ನಿವೃತ್ತಿ ಘೋಷಿಸಿದ್ದೆ ಎಂಬುದಕ್ಕೆ ಕಾರಣ ಹೇಳಿದ್ದರು. ಈ ವೇಳೆ ಭಾರತೀಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬೌಲಿಂಗ್‌ ಮಾಡೋದು ನನಗೆ ಬಲು ಸುಲಭವಾಗಿತ್ತು ಎಂದೂ ಹೇಳಿದ್ದರು.

ಆದರೆ ಅಮೀರ್ ಹೇಳಿಕೆ ಕನೇರಿಯಾಗೆ ಇಷ್ಟವಾದಂತಿಲ್ಲ. ‘ಮೊಹಮ್ಮದ್ ಅಮೀರ್, ನೀನು ಪ್ರಚಾರ ಬಯಸಿದ್ದೀಯ ಅನ್ನೋದು ಗೊತ್ತು. ಅದರಲ್ಲಿ ಅನುಮಾನವಿಲ್ಲ. ನೀನು ಪಾಕಿಸ್ತಾನಕ್ಕೆ ಅದ್ಭುತ ಬೌಲರ್ ಆಗಿದ್ದೆ. ಯಾವಾಗ ನಿನಗೆ ಈ ಬಗ್ಗೆ ಅನುಮಾನ ಬರುತ್ತದೋ ಆಗ ನೀನು ಪ್ರಚಾರ ಮಾಡಿಕೊಳ್ಳುತ್ತೀಯ,’ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ ಹೇಳಿದ್ದಾರೆ.

‘ಮುಂಬರಲಿರುವ ಸರಣಿಗೆ ಅಥವಾ ಪ್ರಸ್ತುತ ಸರಣಿಯಲ್ಲಿ ಮುಖಾಮುಖಿಯಾಗಲಿದ್ದೇವೆ ಅನ್ನುವಾಗ ಅಂಥ ಹೇಳಿಕೆಗಳೆಲ್ಲ ಹೇಳುತ್ತೇವೆ. ನಾವು ಭಾರತ vs ಪಾಕಿಸ್ತಾನ ಸರಣಿಯನ್ನು ಆಡಲು ಹೋಗುವುದಿಲ್ಲ, ಅಥವಾ ನೀನು ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಲು ಹೋಗುವುದಿಲ್ಲ. ಆದರೂ ನೀನಿದೆಲ್ಲವನ್ನೂ ಪ್ರಚಾರಕ್ಕಾಗಿ ಹೇಳುತ್ತಿದ್ದೀಯ,’ ಎಂದು ಕನೇರಿಯಾ ಹೇಳಿಕೆ ನೀಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...