ತಮ್ಮ ಮುದ್ದು ಮಗುವನ್ನು ಹೆಸರಿನೊಂದಿಗೆ ಪರಿಚಯಿಸಿದ ಶ್ರೇಯ ಘೋಷಾಲ್

Date:

ಖ್ಯಾತ ಗಾಯಕಿ ಶ್ರೇಯಾ ಘೋಷಲ್ ತನ್ನ ಮುದ್ದು ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇತ್ತೀಚಿಗೆ ಅಂದರೆ ಮೇ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಶ್ರೇಯಾ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮಗ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೆಸರನ್ನು ರಿವೀಲ್ ಮಾಡಿದ್ದಾರೆ.

ಮಗುವಿಗೆ ಜನ್ಮ ನೀಡಿದ ಬಳಿಕ ಶ್ರೇಯಾ ಘೋಷಲ್ ಸಂತಸದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ‘ದೇವರ ಆಶೀರ್ವಾದದಿಂದ ಗಂಡು ಮಗು ಜನಿಸಿದೆ. ನಾನು ಎಂದೂ ಇಷ್ಟು ಭಾವುಕ ಆಗಿರಲಿಲ್ಲ. ಪತಿ ಶಿಲಾದಿತ್ಯ ಸೇರಿ ನನ್ನ ಕುಟುಂಬದವರೆಲ್ಲ ಅತೀವ ಖುಷಿಯಲ್ಲಿದ್ದೇವೆ. ನಿಮ್ಮ ಅಗಣಿತ ಆಶೀರ್ವಾದಗಳಿಗೆ ಧನ್ಯವಾದ’ ಎಂದಿದ್ದರು.

ಇದೀಗ ಖ್ಯಾತ ಗಾಯಕಿ ಮಗನ ಫೋಟೋ ಜೊತೆ ಪ್ರತ್ಯಕ್ಷರಾಗಿದ್ದಾರೆ. ಶ್ರೇಯಾ ಮಗನಿಗೆ ಏನೆಂದು ನಾಮಕರಣ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ಮುದ್ದು ಮಗನಿಗೆ ದೇವ್ಯಾನ್ ಮುಖೋಪಧ್ಯಾಯ ಎಂದು ನಾಮಕರಣ ಮಾಡಿದ್ದಾರೆ.

 

ಈ ಬಗ್ಗೆ ಬರೆದುಕೊಂಡಿರುವ ಶ್ರೇಯಾ, ‘ದೇವ್ಯಾನ್ ಮುಖೋಪಾಧ್ಯಾಯನನ್ನು ಪರಚಯಿಸುತ್ತಿದ್ದೀವಿ. ಮೇ 22ರಂದು ಆಗಮಿಸಿ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ. ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿಸಿದನು. ಈ ಅನುಭವ ತಾಯಿ ಮತ್ತು ತಂದೆಗೆ ಮಾತ್ರ ಸಾಧ್ಯ. ಶುದ್ಧ ಪ್ರೀತಿ. ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ಈ ಸುಂದರವಾದ ಉಡುಗೊರೆಗೆ ನಾನು ಮತ್ತು ಶಿಲಾದಿತ್ಯ ಕೃತಜ್ಞರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...