ಕೊರೋನಾವೈರಸ್ ಹಾವಳಿಯಿಂದ ಕಳೆದ 1 ತಿಂಗಳಿಂದ ರಾಜ್ಯಾದ್ಯಂತ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಇನ್ನಷ್ಟು ದಿನಗಳಲ್ಲಿ ಲಾಕ್ ಡೌನ್ ಮುಗಿಯಲಿದೆ ಎಂದಿನಂತೆ ಜನಜೀವನ ಪ್ರಾರಂಭವಾಗಲಿದೆ ಎಂದು ಎಣಿಸುತ್ತಿದ್ದ ಜನಸಾಮಾನ್ಯರಿಗೆ ಬಿ ಎಸ್ ಯಡಿಯೂರಪ್ಪ ಮತ್ತೆ ಶಾಕ್ ನೀಡಿದ್ದಾರೆ.
ಜೂನ್ 7ರ ವರೆಗೆ ಲಾಕ್ ಡೌನ್ ಘೋಷಣೆಯನ್ನು ಮಾಡಿದ್ದ ಯಡಿಯೂರಪ್ಪನವರು ಇದೀಗ ಜೂನ್ 7 ರ ನಂತರವೂ 1ವಾರದ ಕಾಲ ಕಠಿಣ ಲಾಕ್ ಡೌನ್ ನಿಯಮ ಮುಂದುವರಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೌದು ಜೂನ್ 7ರ ತನಕ ಇದ್ದ ಕಠಿಣ ಲಾಕ್ ಡೌನ್ ನ ನಿಯಮವನ್ನು ಜೂನ್ 14ರ ತನಕ ವಿಸ್ತರಿಸಿದ್ದು ಜನಸಾಮಾನ್ಯರು ಇಷ್ಟು ದಿನಗಳವರೆಗೆ ಹೇಗೆ ಲಾಕ್ ಡೌನ್ ನಿಯಮಕ್ಕೆ ಸ್ಪಂದಿಸಿದ್ದಾರೋ ಅದೇ ರೀತಿ ಮುಂದಿನ ದಿನಗಳಲ್ಲಿಯೂ ಸ್ಪಂದಿಸಬೇಕೆಂದು ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.